ಕರ್ನಾಟಕ ಪೊಲೀಸ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ: ಇಲಾಖೆಗೆ ಮೂಲಸೌಕರ್ಯ ಒದಗಿಸಿದ್ದೇವೆ- ಗೃಹ ಸಚಿವ ಅರಗ ಜ್ಞಾನೇಂದ್ರ.

kannada t-shirts

ಮೈಸೂರು,ನವೆಂಬರ್,10,2022(www.justkannada.in):  ಸ್ವಾತಂತ್ರ್ಯ ನಂತರ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರದಿಂದ  ಪೊಲೀಸ್ ಇಲಾಖೆಗೆ ಬೇಕಾದ ಮೂಲಸೌಕರ್ಯ ಒದಗಿಸಿದ್ದೇವೆ. ಕರ್ನಾಟಕ ಪೊಲೀಸ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ನುಡಿದರು.

ಮೈಸೂರಿನಲ್ಲಿ ನೂತನ ಪೋಲಿಸ್ ಠಾಣೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್,  200ಕೋಟಿ ವೆಚ್ಚದಲ್ಲಿ 215 ಪೊಲೀಸ್ ಠಾಣೆಗಳನ್ನ ನಿರ್ಮಿಸಿದ್ದೇವೆ. ವ್ಯಪನ್  ಕೊಟ್ಟಿದ್ದೇವೆ. ಹಿಂದೆ ಇದ್ದ ಸರ್ಕಾರದಲ್ಲಿ ಶೇ. 37% ಖಾಲಿ ಹುದ್ದೆಗಳಿತ್ತು. ಆದರೆ ನಮ್ಮ ಸರ್ಕಾರದಲ್ಲಿ ಕೇವಲ 12ಸಾವಿರ ಹುದ್ದೆ ಖಾಲಿ ಇದೆ. ನಾವು ಬಂದ ಮೇಲೆ 5 ಸಾವಿರ ಕಾನ್ಸ್  ಟೇಬಲ್ ಗಳ ನೇಮಕ ಮಾಡಿದ್ದೇವೆ ಎಂದರು.

ಹರಿಯಾಣದಲ್ಲಿ ನಡೆದ ಕಾನ್ಫಿರೆನ್ಸ್ ನಲ್ಲಿ ಕರ್ನಾಟಕ ಪೊಲೀಸ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿಯ ಆನ್ಲೈನ್  ಪೋಲೀಸ್  ಎಫ್ ಐ ಆರ್ ದಾಖಲು ವ್ಯವಸ್ಥೆ, ಇನ್ವೆಸ್ಟಿಗೆಷನ್ ವಿಧಾನ, 112 ಹೆಲ್ಪ್ ಲೈನ್ ವ್ಯವಸ್ಥೆ ಎಲ್ಲಾ ಉತ್ತಮವಾಗಿದೆ. 112ನಲ್ಲಿ ಕರೆ ಮಾಡಿದ 9 ನಿಮಿಷದಲ್ಲಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇವೆ. ಇದೀಗ ಸೈಬರ್ ವಿಭಾಗವನ್ನು ಬಲ ಪಡಿಸಲಾಗಿದೆ. ಮೈಸೂರು ಪ್ರವಾಸಿತಾಣವಾಗಿರುವ ಕಾರಣ ಇಲ್ಲಿ ಕಾನೂನು ವ್ಯವಸ್ಥೆಗೆ ಹೆಚ್ಚು ಗಮನ ವಹಿಸಲಾಗಿದೆ ಎಂದು ತಿಳಿಸಿದರು.

ಪಿಎಸ್ ಐ ಅಕ್ರಮ ನೇಮಕಾತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪ್ರಕರಣ ಕುರಿತು ಸಿಐಡಿ  ನಡೆಸುತ್ತಿರುವ ತನಿಖೆ ಪ್ರಗತಿಯಲ್ಲಿದೆ. ಪಾರದರ್ಶಕವಾಗಿ ತನಿಖೆ ನಡೆಸಬೇಕು. ಪ್ರಕರಣದಲ್ಲಿ 106 ಮಂದಿ ಕಸ್ಟಡಿನಲ್ಲಿದ್ದಾರೆ ಎಂದರು.

ಪ್ರಾಮಾಣಿಕರಿಗೆ ಅನ್ಯಾಯವಾಗಿರುವ ವಿಚಾರ, ಪ್ರಕರಣ ನ್ಯಾಯಾಲಯದಲ್ಲಿದೆ . ಈ ಹಿನ್ನೆಲೆ ಈ ಬಗ್ಗೆ ನಾನೇನು ಹೇಳಲಾಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Key words: Appreciation – national -level – Karnataka Police – Home Minister -Araga jnanendra.

website developers in mysore