ಯಾರಾದ್ರೂ ಮನವಿ ಕೊಡಲು ಹೀಗೆ ಬರ್ತಾರಾ..? ಹೋಗಿ ಮೋದಿ ಹತ್ರನೇ ನ್ಯಾಯ ಕೇಳಲಿ- ಹೆಚ್.ಡಿ ಕುಮಾರಸ್ವಾಮಿ ಗರಂ.

Promotion

ಧಾರವಾಡ,ಜೂನ್,4,2022(www.justkannada.in): ಧಾರವಾಡದಲ್ಲಿ ಕಾರಿಗೆ ಮುತ್ತಿಗೆ ಹಾಕಿ, ಗದ್ದಲವೆಬ್ಬಿಸಿದ ಪಿಎಸ್​ಐ ಹುದ್ದೆ ನೇಮಕಾತಿಯಿಂದ ವಂಚಿತರಾದ ಅಭ್ಯರ್ಥಿಗಳ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗರಂ ಆದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಳೆದ ಒಂದು ವಾರದಿಂದ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದು,  ಸಮಸ್ಯೆ ಆಲಿಸಲು ಎಚ್​ಡಿಕೆ ಆಗಮಿಸಿದ್ದರು. ಈ ವೇಳೆ ಅಲ್ಲಿ ಜಮಾಯಿಸಿದ ಪಿಎಸ್​ ಐ ಅಭ್ಯರ್ಥಿಗಳು, ನಮಗೆ ನ್ಯಾಯ ಕೊಡಿಸಿ ಎಂದು ಹೆಚ್.ಡಿ ಕುಮಾರಸ್ವಾಮಿ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾದರು.

ಘೇರಾವ್ ಹಾಕಿದ ಪಿಎಸ್ ಐ ಅಭ್ಯರ್ಥಿಗಳ ವಿರುದ್ಧ ಕೆಂಡ ಮಂಡಲರಾದ ಹೆಚ್.ಡಿ ಕುಮಾರಸ್ವಾಮಿ, ಮೋದಿ ಮೋದಿ ಅಂತಾ ಘೋಷಣೆ ಕೂಗುತ್ತಿದ್ರು ಹೋಗಿ ಮೋದಿ ಹತ್ರನೇ ನ್ಯಾಯ ಕೇಳಲಿ.  ಅಭ್ಯರ್ಥಿಗಳು ನನಗೆ ಮನವಿ ಕೊಡಲಿಕ್ಕೆ ಬಂದಿರಲಿಲ್ಲ  ಯಾರಾದ್ರೂ ಮನವಿ ಕೊಡಲಿಕ್ಕೆ ಹೀಗೆ ಬರ್ತಾರಾ..?   ನನ್ನ ಕಾರಿಗೆ ಮುತ್ತಿಗೆ ಹಾಕಲು ಯಾರೋ ಕಳಿಸಿದ್ದಾರೆ ಎಂದು ಕಿಡಿಕಾರಿದರು.

ಮನವಿ ಕೊಡಲು ಬರುವವರು ಆ ರೀತಿ ನಡೆದುಕೊಳ್ಳುತ್ತಾರಾ. ಅಲ್ಲಿ ದೊಂಬಿ ಎಬ್ಬಿಸಲು ಆಯೋಜನೆ ಮಾಡಿ ಯಾರೋ ಕಳುಹಿಸಿದ್ದಾರೆ. ಅದಕ್ಕೆ ನಾನು ಪಾಲುದಾರನಾಗಲ್ಲ, ನಾನು ಬಹಳ ಜನರನ್ನು ನೋಡಿದ್ದೇನೆ. ಈ ಆಟ ನನ್ನ ಹತ್ತಿರ ನಡೆಯೊಲ್ಲ ಎಂದು ಹರಿಹಾಯ್ದರು.

Key words: appeal –PSI- Candidates-former CM- HD Kumaraswamy – Dharwad