ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ: ಬಿಗಿ ಪೊಲೀಸ್ ಭದ್ರತೆ…

ಬೆಂಗಳೂರು,ಸೆಪ್ಟಂಬರ್,25,2020(www.justkannada.in):  ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ  ಬೆಂಗಳೂರಿನಲ್ಲಿ ರೈತರು ಪ್ರತಿಭಟನೆಗಿಳಿದಿದ್ಧಾರೆ.jk-logo-justkannada-logo

ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸಲಿದ್ದು ಈ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 300 ಮಂದಿ ಪೊಲೀಸರು, 500 ಮಂದಿ ಟ್ರಾಫಿಕ್ ಪೊಲೀಸ್ 3 ಪೊಲೀಸ್ ವಾಹನ್ ಮತ್ತು 10 ಬಿಎಂಟಿಸಿ ಬಸ್ ಗಳನ್ನ ವ್ಯವಸ್ಥೆ ಮಾಡಲಾಗಿದೆ.Opposition - amendment – APMC-act-Land Reform Act- Protest- farmers -arrested - police

ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಒಂದೆಡೆ ರಾಜ್ಯಾದ್ಯಂತ ರೈತರು ಹೆದ್ಧಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. apmc act-Farmers' -protest – Bengaluru- Land Reform Amendment Act-Tight- police security.

ಈ ಕುರಿತು ಪ್ರತಿಕ್ರಿಯಿಸಿರುವ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್,ಇಂದಿನ ಪ್ರತಿಭಟನೆಗೂ ನಮಗೂ ಸಂಬಂಧವಿಲ್ಲ. ಎರಡೆರೆಡು ಕಾರ್ಯಕ್ರಮ ಮಾಡುವ ಅವಶ್ಯಕತೆ ಇಲ್ಲ. ಸೋಮವಾರ ಬಂದ್ ಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆದರೂ ಇಂದು ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಡೆಯುವ ಪ್ರತಿಭಟನಯಲ್ಲಿ ಭಾಗಿಯಾಗುತ್ತೇವೆ ಎಂದಿದ್ದಾರೆ.

Key words: apmc act-Farmers’ -protest – Bengaluru- Land Reform Amendment Act-Tight- police security.