ಕೊಹ್ಲಿ ಜತೆ ಇಂಗ್ಲೆಂಡ್’ಗೆ ಪ್ರಯಾಣ ಬೆಳೆಸಿದ ಅನುಷ್ಕಾ! ಈ ಫೋಟೋ ವೈರಲ್ ಆಗಿದ್ದೇಕೆ?

kannada t-shirts

ಬೆಂಗಳೂರು, ಜೂನ್ 03, 2021 (www.justkannada.in): ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ನಾಯಕ ವಿರಾಟ್ ಕೊಹ್ಲಿ ಜತೆ ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್‌ಗೆ ತೆರಳಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟಿಗರನ್ನು ಅವರ ಹೆಂಡತಿಯರೊಂದಿಗೆ ಕರೆತರಲು ಯುಕೆ ಸರ್ಕಾರ ಬಿಸಿಸಿಐಗೆ ಅನುಮತಿ ನೀಡಿತ್ತು. ಹೀಗಾಗಿ ಅನುಷ್ಕಾ ಕೂಡ ಕೊಹ್ಲಿಯೊಂದಿಗೆ ಲಂಡನ್‌ಗೆ ತೆರಳಿದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪುತ್ರಿ ವಮಿಕಾ ದಂಪತಿಯೊಂದಿಗೆ ಕಾಣಿಸಿಕೊಂಡಿದ್ದಾಳೆ. ಟೀಮ್ ಇಂಡಿಯಾ ಖಾಸಗಿ ಚಾರ್ಟರ್ಡ್ ವಿಮಾನದಲ್ಲಿ ಇಂಗ್ಲೆಂಡ್‌ಗೆ ತೆರಳಿದೆ. ಆಟಗಾರರು ಮೊದಲು ಲಂಡನ್ ತಲುಪಲಿದ್ದಾರೆ.

 

website developers in mysore