ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ- ಸರ್ಕಾರಕ್ಕೆ ಹೆಚ್.ಡಿ ದೇವೇಗೌಡರಿಂದ ಆಗ್ರಹ…

kannada t-shirts

ಬೆಂಗಳೂರು,ಆಗಸ್ಟ್,26,2020(www.justkannada.in): ಅನುದಾನ ರಹಿತ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ. ಅವರಿಗೆ ಸೇವಾಭದ್ರತೆ, ಬಾಕಿ ಆರ್ ಟಿಇ ಹಣ ಬಿಡುಗಡೆ, ಆರೋಗ್ಯ ವಿಮೆ ಸೇರಿದಂತೆ ಹಲವು ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸರ್ಕಾರಕ್ಕೆ ಆಗ್ರಹಿಸಿದರು.jk-logo-justkannada-logo

ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಇಂದು ಬೆಂಗಳೂರಿನ ಮೌರ್ಯ ವೃತ್ತದ ಬಳಿ ವಿಧಾನ ಪರಿಷತ್ ಸದಸ್ಯರ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಖಾಸಗಿ ಶಾಲೆಗಳ ಶಿಕ್ಷಕರ ಸಹಾಯಕ್ಕೆ ಸರ್ಕಾರ ಕೂಡಲೇ ಧಾವಿಸಬೇಕು, ಈಗಾಗಲೇ ಈ ವಿಷಯವಾಗಿ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದೇನೆ. ಬೇಕಾದರೆ ಮತ್ತೊಂದು ಪತ್ರವನ್ನು ಸಿಎಂಗೆ ಬರೆದು ಒತ್ತಾಯಿಸುತ್ತೇನೆ. ಇಂತಹ ಸಮಯದಲ್ಲಿ ಸರ್ಕಾರ ಮಾನವೀಯತೆ ಪ್ರದರ್ಶನ ಮಾಡಬೇಕು, ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಈ ವಿಚಾರವನ್ನು ನಾನು ಮುಂದಿನ ಸಂಸತ್ ಅಧಿವೇಶನಲ್ಲಿ ಕೇಂದ್ರ ಸರ್ಕಾರದ ಗಮನಕ್ಕೂ ತರುತ್ತೀನಿ , ಅವಶ್ಯ ಬಿದ್ದರೆ ಅಧಿವೇಶನದಲ್ಲಿ ಚರ್ಚೆಗೂ ತಂದು ಮಾತಾನಾಡುತ್ತೀನಿ  ಎಂದು ಹೆಚ್.ಡಿ ದೇವೇಗೌಡ ಭರವಸೆ ನೀಡಿದರು.

ರಾಷ್ಟ್ರೀಯ ಏಕರೂಪ ಶಿಕ್ಷಣ ನೀತಿಗೆ ನಮ್ಮ ವಿರೋಧವಿದೆ

ಕೇಂದ್ರ ಸರ್ಕಾರ ಏಕರೂಪ ಶಿಕ್ಷಣ ಜಾರಿಗೆ ತರಲು ಹೊರಟಿದೆ, ಇದರಿಂದ ಅನೇಕ ಸಮಸ್ಯೆಗಳು ಆಗುತ್ತವೆ. ಯಾರಿಗೂ ಇದರಿಂದ ಉಪಯೋಗವಾಗಲ್ಲ. ನಾನು ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೀನಿ, ಅಂಕಿ- ಅಂಶದ ಸಮೇತ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

ಶಿಕ್ಷಕರ ಸಮಸ್ಯೆ ಪರಿಹಾರ ಮಾಡದೇ ಹೋದರೆ ಖುದ್ದು ಹೋರಾಟಕ್ಕೆ ಇಳಿಯುತ್ತೇನೆ.  ಇದು ಮೊದಲ ಹಂತದ ಹೋರಾಟ ಅಷ್ಟೇ.  ಸರ್ಕಾರಗಳು ಸ್ಪಂದಿಸದೇ ಹೋದರೆ ಮತ್ತೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಹೆಚ್.ಡಿ ದೇವೇಗೌಡ ಎಚ್ಚರಿಕೆ ನೀಡಿದರು. announce-special-package-private-school-teachers-former-pm-hd-deve-gowda-demands

ಪ್ರತಿಭಟನೆಯಲ್ಲಿ ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು, ಶಿಕ್ಷಣ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.  ಜೊತೆಗೆ  ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್ . ಕೆ  ಕುಮಾರಸ್ವಾಮಿ, ಪರಿಷತ್ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಬೋಜೇಗೌಡ, ಕೆ.ಟಿ ಶ್ರೀಕಂಠೇಗೌಡ, ತಿಪ್ಪೇಸ್ವಾಮಿ, ಮಾಜಿ ಪರಿಷತ್ ಸದಸ್ಯ ಟಿ. ಎ ಶರವಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Key words: Announce -Special Package – Private School –Teachers-former PM- HD Deve Gowda -demands

website developers in mysore