ಗುತ್ತಿಗೆದಾರರಿಗೆ ಸರ್ಕಾರದಿಂದ ಪಾವತಿಯಾಗಬೇಕಿರುವ ಬಾಕಿ ಬಿಲ್ಲುಗಳ ಮೊತ್ತ ರೂ.೧೫,೦೦೦ ಕೋಟಿಗೆ ಏರಿಕೆ!

ಬೆಂಗಳೂರು, ಜುಲೈ ೧೨, ೨೦೨೧ (www.justkannada.in): ಕಳೆದ ಕೆಲವು ವರ್ಷಗಳಲ್ಲಿ ರಾಜ್ಯ ಸರ್ಕಾರದ ಹಣಕಾಸಿನ ಮುಗ್ಗಟ್ಟಿನಿಂದಾಗಿ ಸರ್ಕಾರದ ವಿವಿಧ ಕಾಮಗಾರಿಗಳನ್ನು ಗುತ್ತಿಗೆ ವಹಿಸಿರುವಂತಹ ಗುತ್ತಿಗೆದಾರರಿಗೆ ಪಾವತಿಯಾಗಬೇಕಿರುವ ಮೊತ್ತ ರೂ.೧೫,೦೦೦ ಕೋಟಿಗೆ ಏರಿಕೆಯಾಗಿದೆ!
ಸರ್ಕಾರದ ಮೂಲಗಳ ಪ್ರಕಾರ, ಎಲ್ಲಾ ಸರ್ಕಾರಿ ಇಲಾಖೆಗಳ ಪೈಕಿ ಲೋಕೋಪಯೋಗಿ ಇಲಾಖೆ (ಪಿಡಬ್ಲೂö್ಯಡಿ) ಅತೀ ಹೆಚ್ಚಿನ ಬಿಲ್ಲುಗಳು, ಅಂದರೆ ರೂ.೪,೫೦೦ ಕೋಟಿ ಪಾವತಿ ಬಾಕಿ ಉಳಿಸಿಕೊಂಡಿದೆ. ಜಲ ಸಂಪನ್ಮೂಲ ಇಲಾಖೆ ಹಾಗೂ ಬಿಬಿಎಂಪಿ ನಂತರದ ಸ್ಥಾನಗಳಲ್ಲಿದ್ದು, ಇದರ ಬಾಕಿ ಮೊತ್ತ ರೂ.೩,೦೦೦ ಕೋಟಿಗಳು!jk
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳ ಪ್ರಕಾರ ಇದು ಬಹಳ ಬೃಹತ್ ಮೊತ್ತವಾಗಿದ್ದು, ಈ ಮೊತ್ತ ಅವರಿಗೆ ಯಾವಾಗ ಬರುತ್ತದೋ ಎಂದು ಚಿಂತೆಯಾಗಿದೆಯAತೆ.
ಸರ್ಕಾರದ ಪ್ರಕಾರ, ಈ ರೀತಿ ಬಿಲ್ಲುಗಳ ಪಾವತಿ ಸಾಮಾನ್ಯ ವಿಚಾರವಾಗಿದ್ದು, ಸಾಧ್ಯವಾದಷ್ಟು ಬೇಗ ಪಾವತಿಸಲಾಗುತ್ತದೆಯಂತೆ.
ಸರ್ಕಾರದ ಉನ್ನತ ಮೂಲಗಳ ಪ್ರಕಾರ ಈ ಗುತ್ತಿಗೆದಾರರ ಬಿಲ್ಲುಗಳ ಬಾಕಿ ಮೊತ್ತ ೨೦೧೮-೧೯ನೇ ಹಣಕಾಸು ವರ್ಷದಿಂದ ಹೆಚ್ಚಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಅವರ ಮುಂದಾಳತ್ವದ ಸಮ್ಮಿಶ್ರ ಸರ್ಕಾರ ಉರುಳಿದ ನಂತರ ವಿವಿಧ ಗುತ್ತಿಗೆದಾರರಿಗೆ ಬಾಕಿ ಇದ್ದ ಮೊತ್ತ ರೂ.೪,೫೦೦ ರಿಂದ ರೂ.೫,೦೦೦ ಕೋಟಿಗಳಾಗಿತ್ತು. ಅಂದಿನಿAದ ರಾಜ್ಯದ ಆದಾಯ ಇಳಿಕೆಯಾಗುತ್ತಾ ಬಂದಿದೆ, ಅದರಲ್ಲಿಯೂ ವಿಶೇಷವಾಗಿ ಕಳೆದ ಎರಡು ವರ್ಷಗಳಲ್ಲಿ ಈ ಬಿಲ್ಲುಗಳ ಸಂಖ್ಯೆ ಹೆಚ್ಚಾಗಿವೆಯಂತೆ.
ಮೂಲಗಳ ಪ್ರಕಾರ, “ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಪಾವತಿ ಮೊತ್ತ ಜುಲೈ ೨೦೧೯ರಂದು ರೂ.೧,೩೦೦ ರಿಂದ ರೂ.೧,೫೦೦ ಕೋಟಿಗಳಾಗಿತ್ತು. ಈ ಮೊತ್ತ ಕಳೆದ ಎರಡು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಬಹುತೇಕ ಎಲ್ಲಾ ಇಲಾಖೆಗಳಲ್ಲಿಯೂ ಬಿಲ್ಲುಗಳ ಪಾವತಿ ಬಾಕಿ ಉಳಿದುಕೊಂಡಿವೆ. ಅತೀ ಹೆಚ್ಚು ಲೋಕೋಪಯೋಗಿ ಇಲಾಖೆಯಲ್ಲಿ,” ಎನ್ನುತ್ತವೆ ಮೂಲಗಳು. ಈ ರೀತಿ ಅತೀ ಹೆಚ್ಚಿನ ಬಾಕಿ ಉಳಿಸಿಕೊಂಡಿರುವ ಇತರೆ ಇಲಾಖೆಗಳ ಪೈಕಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯೂ ಸೇರಿದೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರ ಪ್ರಕಾರ, “ಈ ಹಿಂದೆಯೂ ಬಿಲ್ಲುಗಳ ಪಾವತಿಯಲ್ಲಿ ವಿಳಂಬವಾಗುತಿತ್ತು. ಆದರೆ ಪಾವತಿಯಾಗಬೇಕಿರುವ ಬಾಕಿ ಇಷ್ಟೊಂದು ಬೃಹತ್ ಮೊತ್ತವಾಗಿರುವು ಈ ಹಿಂದೆ ಎಂದೂ ಕಂಡಿರಲಿಲ್ಲ,” ಎನ್ನುತ್ತಾರೆ.
ಈ ಕುರಿತು ಉಪಮುಖ್ಯಂತ್ರಿ ಲಕ್ಷö್ಮಣ್ ಸವದಿಯವರನ್ನು ಸಂಪರ್ಕಿಸಿದಾಗ ಅವರು ಇದು ಸಾಮಾನ್ಯ ವಿಷಯ ಎಂದರು. ಅವರ ಪ್ರಕಾರ ಈ ಇಡೀ ರೂ.೧೫,೦೦೦ ಕೋಟಿ ಬಿಲ್ಲುಗಳ ಬಾಕಿ ಕಳೆದ ಸರ್ಕಾರದಿಂದ ಬಂದಿರುವುದAತೆ! “ನಾವು ಎಲ್ಲಾ ಹಳೆಯ ಬಾಕಿಗಳನ್ನೂ ತೀರಿಸುತ್ತಿದ್ದೇವೆ,” ಎನ್ನುತ್ತಾರೆ ಸವದಿ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಸವದಿ ಅವರು, ಪ್ರಸ್ತುತ ಆರ್ಥಿಕ ಸನ್ನಿವೇಶ ಸರ್ಕಾರದ ಆದಾಯದ ಮೇಲೆ ಪರಿಣಾಮ ಬೀರಿದ್ದು, ಬಿಲ್ಲುಗಳ ಪಾವತಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ,” ಎಂದಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

key words:  amount –  government – increased