420 ಪತ್ರಕರ್ತರ ಬಗ್ಗೆಯೂ ಬರೆಯಿರಿ: ಅಡಗೂರು ಹೆಚ್.ವಿಶ್ವನಾಥ್  ಈ ರೀತಿ ಯಾರಿಗೆ ಹೇಳಿದ್ದು ಗೊತ್ತಾ…?

ಮೈಸೂರು,ಮೇ,19,2019(www.justkannada.in): ಮಾಧ್ಯಮದವರನ್ನ ಕಂಡರೇ ಈ ದೇಶದ ಪ್ರಧಾನಮಂತ್ರಿಯೂ ಸಹ  ಹೆದರಿಕೊಳ್ಳುತ್ತಾರೆ. ಮೊನ್ನೆ ಸುದ್ದಿಗೋಷ್ಠಿಯಲ್ಲಿ ಮೋದಿ ಮಾತನಾಡಲಿಲ್ಲ. ಮಾಧ್ಯಮದವರನ್ನ ಕಂಡರೇ ರಾಜಕಾರಣಿಗಳು ಹೆದರುತ್ತಾರೆ. ಹೀಗಾಗಿ ಮಾಧ್ಯಮಗಳ ಬಗ್ಗೆ ಬರೆಯಿರಿ. ಯಾರ್ಯಾರು 420 ಪತ್ರಕರ್ತರಿದ್ದಾರೆ ಅವರ ಬಗ್ಗೆಯೂ ಬರೆಯಿರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್,ವಿಶ್ವನಾಥ್ ಅವರು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ಪ್ರೇರೆಪಿಸಿದರು.

ನಗರದ ಕಲಾಮಂದಿರದಲ್ಲಿ  ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ  ಸಮುದಾಯದ ನಾಯಕರು ಹಾಗೂ ಸಮಾಜಮುಖಿ ಶ್ರೀಸಾಮಾನ್ಯರು ಎಂಬ ಎರಡು ಕೃತಿಗಳನ್ನ  ಬಿಡುಗಡೆ ಮಾಡಲಾಯಿತು. ಸಿಎಂ ಕುಮಾರಸ್ವಾಮಿ ಎರಡು ಕೃತಿಗಳ ಲೋಕಾರ್ಪಣೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೂಪ ಪ್ರಕಾಶನದ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಡಗೂರು ಹೆಚ್.ವಿಶ್ವನಾಥ್,  ಮೊನ್ನೆ ಸುದ್ದಿಗೋಷ್ಠಿಯಲ್ಲಿ ಮೋದಿ ಮಾತನಾಡಲಿಲ್ಲ. ಮೋದಿ ಅವರು ಒಬ್ಬರೆ ಕುಳಿತುಕೊಳ್ಳಲಾಗದೆ ಅಮಿತ್ ಷಾರನ್ನು ಕೂರಿಸಿಕೊಂಡರು. ಮೋದಿ 5 ವರ್ಷದಲ್ಲಿ 3 ಇಂಟರ್‌ ವ್ಯೂ ಕೊಟ್ಟಿದ್ದಾರೆ. ಮೊನ್ನೆ ಸಿನಿಮಾ ನಟ ಅಕ್ಷಯ್ ಜೊತೆ ಇಂಟರ್ ವ್ಯೂ ಮಾಡಿಸಿಕೊಂಡಿದ್ದೀರಿ. ಅವರು ನೀವು ಜುಬ್ಬಾ ಹಾಕೋದು ಯಾವುದು, ನಿಮ್ಮ ಸ್ಪ್ರೇ ಯಾವುದು ಅಂತೆಲ್ಲಾ ಕೇಳಿದ್ದಾರೆ. ಹೀಗಾಗಿ ರಾಜಕಾರಣಿಗಳು ಮಾಧ್ಯಮವನ್ನು ಕಂಡರೆ ಹೆದರುತ್ತಾರೆ. ಅದ್ದರಿಂದ ಮಾಧ್ಯಮಗಳ ಬಗ್ಗೆ ಬರೆಯಿರಿ. ಯಾರ್ಯಾರು 420 ಪತ್ರಕರ್ತರಿದ್ದಾರೆ ಅವರ ಬಗ್ಗೆಯೂ ಬರೆಯಿರಿ. ಈ ರಾಜ್ಯದಲ್ಲಿ ಅದು ಸಹ ದಾಖಲಾಗಲಿ ಎಂದು ಹಿರಿಯ ಪತ್ರಕರ್ತ ಅಂಶಿಪ್ರಸನ್ನ ಕುಮಾರ್ ಅವರಿಗೆ ಸಲಹೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಹೆಚ್. ವಿಶ್ವನಾಥ್..

ಈ ಕಾರ್ಯಕ್ರಮದಲ್ಲಿ ಸಮುದಾಯದ ನಾಯಕರು ಪುಸ್ತಕ ಬಗ್ಗೆ ಮಾತನಾಡುವಾಗ  ಮಾಜಿ ಸಿಎಂ  ಸಿದ್ದರಾಮಯ್ಯರನ್ನು ಹೆಚ್. ವಿಶ್ವನಾಥ್ ಗುಣಗಾನ ಮಾಡಿದರು. ಸಿದ್ದರಾಮಯ್ಯ 13 ಬಾರಿ ಬಜೆಟ್ ಮಂಡಿಸಿದ್ದಾರೆ. ಅವರೇನು ಆಕ್ಸ್‌ಫರ್ಡ್ ನಲ್ಲಿ ಓದಿಕೊಂಡು ಬಂದಿರಲಿಲ್ಲ. ಅವರು ಸಹ ರೈತರ ಮನೆಯಿಂದ ಬಂದವರು. ಅಂತಹ ನಾಯಕರೂ ಸಹ ಈ ಭಾಗದಿಂದಲೇ ಹೋದವರು. ತುಂಬಾ ನಾಯಕರ ಬಗ್ಗೆ ಈ ಪುಸ್ತಕದಲ್ಲಿ ಮಾಹಿತಿ ಇದೆ. ಅದರಲ್ಲಿ ಸಿದ್ದರಾಮಯ್ಯರು ಕೂಡ ಒಬ್ಬರು ಎಂದು ಹೊಗಳಿದರು.

ಮೊನ್ನೆಯಷ್ಟೇ ಸಿದ್ದರಾಮಯ್ಯ ದೇವರಾಜ ಅರಸುರವರಂತೆ ಆಡಳಿತ ಮಾಡಿದ್ದಾರಾ..?  ಎಂದು ಪ್ರಶ್ನಿಸಿದ್ದ ಹೆಚ್. ವಿಶ್ವನಾಥ್  ಇದೀಗ  ಇಂದು ಒಳ್ಳೆ ಬಜೆಟ್ ಮಂಡಿಸಿದ್ದಾರೆ ಎಂದು  ಕೊಂಡಾಡಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಡಿ.ದೇವೇಗೌಡ, ಸಚಿವ ಸಾರಾ ಮಹೇಶ್, ಸಚಿವ ಪುಟ್ಟರಂಗ ಶೆಟ್ಟಿ, ಸಂಸದ ದೃವನಾರಾಯಣ್, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ಎಲ್.ನಾಗೇಂದ್ರ, ಹರ್ಷವರ್ಧನ್, ಅನಿಲ್ ಚಿಕ್ಕಮಾದು, ಅಶ್ವಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Key words: Also write about 420 journalists- H. Vishwanath said

#mysore #hvishwanath #book #released