ಬಾಕ್ಸ್ ಆಫೀಸ್’ನಲ್ಲಿ ಅಲ್ಲು ಅರ್ಜುನ್ ‘ಪುಷ್ಪ’ ಗಳಿಸಿದ್ದೇಷ್ಟು…?

ಬೆಂಗಳೂರು, ಡಿಸೆಂಬರ್ 12, 2021 (www.justkannada.in): ಬಾಕ್ಸ್ ಆಫೀಸ್ ತಜ್ಞr ಪ್ರಕಾರ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಮೂರೇ ದಿನಕ್ಕೆ ವಿಶ್ವಾದ್ಯಂತ ಬರೋಬ್ಬರಿ ₹ 173 ಕೋಟಿ ಗಳಿಸಿದೆ ಎನ್ನಲಾಗಿದೆ.

ಹೌದು.  ‘ಪುಷ್ಪ: ದಿ ರೈಸ್’ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಬಾಕ್ಸಾಫೀಸ್​​ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಇನ್ನು ‘ಪುಷ್ಪ’ ಚಿತ್ರತಂಡ ಎರಡನೇ ಭಾಗದ ಬಿಡುಗಡೆಯನ್ನು ಘೋಷಿಸಿದ್ದು, 2022ರ ಡಿಸೆಂಬರ್​ನಲ್ಲಿ ‘ಪುಷ್ಪ: ದಿ ರೂಲ್’ ತೆರೆಕಾಣಲಿದೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಧನಂಜಯ್ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಅಲ್ಲದೇ ನಟಿ ಸಮಂತಾ ಐಟಂ ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ.

ಚಿತ್ರವನ್ನು ಸಂಪೂರ್ಣವಾಗಿ ಆವರಿಸಿರುವ ಅಲ್ಲು ಅರ್ಜುನ್ ಅವರದ್ದು, ಒನ್ ಮ್ಯಾನ್ ಶೋ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ಹೊರಹಾಕಿದ್ದರು. ರಶ್ಮಿಕಾ ನಟನೆಗೂ ಪ್ರಶಂಸೆ ಸಿಕ್ಕಿದೆ.