ನೂತನ ಸಚಿವರಿಗೆ ಕೊಠಡಿಗಳ ಹಂಚಿಕೆ ಮಾಡಿ ಸರ್ಕಾರ ಆದೇಶ: ಡಿಕೆ ಶಿವಕುಮಾರ್ ಇದ್ದ ಕೊಠಡಿಗೆ ಪಟ್ಟು ಹಿಡಿದಿದ್ದ ರಮೇಶ್ ಜಾರಕಿಹೊಳಿಗೆ ನಿರಾಸೆ…

ಬೆಂಗಳೂರು,ಫೆ,6,2020(www.justkannada.in): ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು ನೂತನ 10 ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ನೂತನ 10 ಸಚಿವರು ಸಂಪುಟಕ್ಕೆ ಸೇರ್ಪಡೆಯಾದ ಹಿನ್ನೆಲೆ ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ 28ಕ್ಕೆ ಏರಿಕೆಯಾಗಿದೆ. ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 6 ಸಚಿವರಿಗೆ ವಿಧಾನಸೌಧದಲ್ಲಿ ಉಳಿದ 4 ಸಚಿವರಿಗೆ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ.

ಈ ಹಿಂದೆ ಡಿಕೆ ಶಿವಕುಮಾರ್ ಸಚಿವರಾಗಿದ್ದಾಗ ನೀಡಿದ್ದ ಕೊಠಡಿ ಸಂಖ್ಯೆ 336 ಅನ್ನ ತನಗೆ  ನೀಡುವಂತೆ ಸಚಿವ ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಆದರೆ ಅಂತಿಮವಾಗಿ ರಮೇಶ್ ಜಾರಕಿಹೊಳಿಗೆ 342 /342ಎ ಕೊಠಡಿಯನ್ನ ನೀಡಲಾಗಿದೆ.

ನೂತನ ಸಚಿವರ ವಿಧಾನಸೌಧ, ವಿಕಾಸ ಸೌಧದ ಕೊಠಡಿ ಸಂಖ್ಯೆ ಹೀಗಿದೆ ನೋಡಿ…

ನೂತನ ಸಚಿವರಿಗೆ ನೀಡಲಾದ ವಿಧಾನಸೌಧದ ಕೊಠಡಿ ಸಂಖ್ಯೆ

ರಮೇಶ್ ಜಾರಕಿಹೊಳಿ -ಕೊಠಡಿ ಸಂಖ್ಯೆ 342/342A

ಡಾ.ಕೆ.ಸುಧಾಕರ್ -ಕೊಠಡಿ ಸಂಖ್ಯೆ 339/339A

ಕೆ ಗೋಪಾಲಯ್ಯ- ಕೊಠಡಿ ಸಂಖ್ಯೆ 252/252A

ಭೈರತಿ ಬಸವರಾಜ್-  ಕೊಠಡಿ ಸಂಖ್ಯೆ 337/337A

ಶಿವರಾಂ ಹೆಬ್ಬಾರ್- ಕೊಠಡಿ ಸಂಖ್ಯೆ 258/258A

ಶ್ರೀಮಂತ ಪಾಟೀಲ್- ಕೊಠಡಿ ಸಂಖ್ಯೆ 301/301A

ನಾಲ್ವರು ನೂತನ ಸಚಿವರಿಗೆ ನೀಡಲಾದ ವಿಕಾಸಸೌಧದ ಕೊಠಡಿ ಸಂಖ್ಯೆಗಳು

ಎಸ್ ಟಿ ಸೋಮಶೇಖರ್ ಕೊಠಡಿ ಸಂಖ್ಯೆ 38/39

ಬಿಸಿ ಪಾಟೀಲ್ ಕೊಠಡಿ ಸಂಖ್ಯೆ 406/407

ನಾರಾಯಣಗೊಡ ಕೊಠಡಿ ಸಂಖ್ಯೆ 234/235

ಆನಂದ್ ಸಿಂಗ್ ಕೊಠಡಿ ಸಂಖ್ಯೆ 36/37

Key words: Allocation -rooms – new minister –vidhansoudha- ordered -state government.