ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಕಿಕ್ ಬ್ಯಾಕ್ ಪಡೆದ ಆರೋಪ: ಲೋಕಾಯುಕ್ತಕ್ಕೆ ದೂರು.

ಬೆಂಗಳೂರು,ನವೆಂಬರ್,2,2022(www.justkannada.in):  ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಚೆಕ್ ಮೂಲಕ ₹ 1.30 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ಧ  ಬಿಜೆಪಿ ಮುಖಂಡ ಎನ್.ಆರ್.ರಮೇಶ್  ಈ ಸಂಬಂಧ ಇಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ ಸಾಲದ ರೂಪದಲ್ಲಿ 1.3 ಕೋಟಿ ರೂ ಹಣ ಪಡೆದು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು. ಎಲ್.ವಿವೇಕಾನಂದ ಎನ್ನುವವರಿಂದ ಸಿದ್ದರಾಮಯ್ಯ ₹ 1.30 ಕೋಟಿ ಲಂಚ ಪಡೆದಿದ್ದರು. ಲಂಚದ ಹಣ ಸಂದಾಯವಾದ ನಂತರವೇ ಅವರು 2014ರಲ್ಲಿ ಟರ್ಫ್​ ಕ್ಲಬ್​ ಉಸ್ತುವಾರಿ ಹುದ್ದೆಗೆ ವಿವೇಕಾನಂದ ಅವರನ್ನು 3 ವರ್ಷಗಳ ಅವಧಿಗೆ ನೇಮಿಸಿದ್ದರು.

ವಿವೇಕಾನಂದ ಅವರಿಂದ ತಾವು ಸಾಲ ಪಡೆದಿರುವುದಾಗಿ ಸಿದ್ದರಾಮಯ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ಕೊಟ್ಟಿದ್ದರು. ಆದರೆ ಇದು ಸಾಲವಾಗಿರಲಿಲ್ಲ. ಕೇಂದ್ರ ಗೃಹ ಇಲಾಖೆ ರೂಪಿಸಿರುವ ನಿಯಮಗಳ ಪ್ರಕಾರ ಯಾರಿಗಾದರೂ ಯಾವುದಾದರೂ ಹುದ್ದೆ ನೀಡುವುದಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಚೆಕ್​ ಪಡೆಯುವಂತಿಲ್ಲ ಎಂದು ಎನ್ .ಆರ್ ರಮೇಶ್ ಆರೋಪಿಸಿದ್ದಾರೆ.

ಈ ಸಂಬಂಧ ಇಂದು ಸಿದ್ಧರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್. ಆರ್ ರಮೇಶ್ ದೂರು ಸಲ್ಲಿಕೆ ಮಾಡಿದ್ದಾರೆ.

Key words: Allegation – kick back- against- former CM –Siddaramaiah-Complaint – Lokayukta.

ENGLISH SUMMARY…

Kickback allegations against former CM Siddaramaiah: Complaint to Lokayukta
Bengaluru, November 2, 2022 (www.justkannada.in): BJP leader N.R. Ramesh has lodged a complaint with the Karnataka Lokayukta alleging that leader of the opposition in the assembly Siddaramaiah had received Rs. 1.3 crore kickback while he was the Chief Minister.
“Siddaramaiah had misused power when he was the Chief Minister of Karnataka by receiving a sum of Rs. 1.3 crore as kickback from a person named L. Vivekananda. Vivekananda was appointed as the Incharge of the Turb club in 2014 for a term of three years after receiving this bribe,” he has alleged.
“Siddaramaiah had informed the Election Commission that he had received a lon from Vivekananda. However it was not so. As per the Union Home Department rules any gift or cheque or any other kind should not be received in turn for any appointment,” N.R. Ramesh alleged in his complaint.
Keywords: N.R.Ramesh/ BJP leader/ former CM Siddaramaiah/ Kickback/ Lokayukta