ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಸೋತ ಸಿಂಧು

kannada t-shirts

ಬರ್ಮಿಂಗ್ ಹ್ಯಾಮ್ , ಮಾರ್ಚ್ 14, 2020 (www.justkannada.in): ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಪಿ.ವಿ.ಸಿಂಧೂ ಸೋಲು ಅನುಭವಿಸಿದ್ದಾರೆ.

ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ಸಿಂಧೂ 21-12, 15-21, 13-21 ರಿಂದ ಜಪಾನ್ ನ ನೊಜೊಮಿ ಒಕುಹಾರ ವಿರುದ್ಧ ಸೋತು ನಿರಾಶೆ ಅನುಭವಿಸಿದರು. ಒಂದು ಗಂಟೆ 8 ನಿಮಿಷ ನಡೆದ ಎಂಟರ ಘಟ್ಟದ ಕಾದಾಟದಲ್ಲಿ ಸಿಂಧೂ ಸೋತಿದ್ದಾರೆ.

ಸಿಂಧೂ ಅವರ ಸೋಲು ಸೂಪರ್ 1000 ಪಂದ್ಯಾವಳಿಯಲ್ಲಿ ಭಾರತದ ಅಭಿಯಾನವನ್ನು ಕೊನೆಗೊಳಿಸಿದೆ.

website developers in mysore