ಕನ್ನಡದಲ್ಲಿ ಟ್ವೀಟ್ ಮಾಡಿ `ಬ್ರಹ್ಮಾಸ್ತ್ರ’ ಟ್ರೈಲರ್ ಹಂಚಿಕೊಂಡ ಆಲಿಯಾ

ಬೆಂಗಳೂರು, ಜೂನ್ 16, 2022 (www.justkannada.in): ನಟ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್‌ ರಿಲೀಸ್ ಆಗಿದೆ.

ವಿಶೇಷ ಎಂದರೆ `ಬ್ರಹ್ಮಾಸ್ತ್ರ’ ಟ್ರೈಲರ್ ಕನ್ನಡದಲ್ಲೂ ರಿಲೀಸ್ ಆಗಿದೆ. ಈ ಹಿನ್ನೆಲೆ ನಟಿ ಆಲಿಯಾ ಭಟ್ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಅಂದಹಾಗೆ ಆಯಾನ್ ಮುಖರ್ಜಿ ನಿರ್ದೇಶನದ `ಬ್ರಹ್ಮಾಸ್ತ್ರ’ ಚಿತ್ರದ ಟ್ರೈಲರ್‌ ರಿಲೀಸ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಟ್ರೈಲರ್ ಹಂಚಿಕೊಂಡು ಟ್ವೀಟ್ ಮಾಡಿರುವ ಆಲಿಯಾ  “ನಮ್ಮೆಲ್ಲರ ಹೃದಯಗಳ ಒಂದು ಭಾಗವೇ-ಬ್ರಹ್ಮಾಸ್ತ್ರ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ನೋಡಿ ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದಾರೆ.