ಹೊಸ ವರ್ಷಾಚರಣೆಗೆ ಅಲರ್ಟ್: ನಗರದಾದ್ಯಂತ 4 ಸಾವಿರ ಕ್ಯಾಮರಾ ಕಣ್ಗಾವಲು- ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು,ಡಿಸೆಂಬರ್,16,2022(www.justkannada.in): ಎರಡು ವರ್ಷ ಕೊರೊನಾ ಇದ್ದ ಕಾರಣ ಹೊಸ ವರ್ಷಾಚರಣೆ ಮಾಡುಲು ಸಾಧ್ಯವಾಗಲಿಲ್ಲ. ಈ ವಾರ್ಷ ಜೋರಾಗಿ ಮಾಡುವ ಸಾದ್ಯತೆ ಇದೆ. ಪೊಲೀಸರು ಭದ್ರತೆ ಇರತ್ತದೆ. ಕಣ್ಗಾವಲಿಗೆ ನಾಲ್ಕು ಸಾವಿರ ಕ್ಯಾಮರಾ ಇರಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸರ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ ಸಭೆ ನಡೆಸಿ ಚರ್ಚಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಚರ್ಚಿಸಿದ್ದೇವೆ. ಹೊಸದಾಗಿ 4 ಸಂಚಾರಿ ಉಪ ವಿಭಾಗಗಳ ರಚನೆ ಮಾಡಲಾಗಿದೆ. ಎರಡು ಕಾನೂನು ಸುವ್ಯವಸ್ಥೆ ಉಪ ವಿಭಾಗಗಳನ್ನು ಮಾಡಿದ್ದೇವೆ ಎಂದು ಹೇಳಿದರು.

ಹೊಸ ವರ್ಷಾಚರಣೆ ಎಂಜಾಯ್ ಮಾಡಲಿ. ಅದರೆ ಮಾದಕ ವಸ್ತುಗಳನ್ನು ಸೇವನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನುಮತಿ ಪಡೆಯದೆ ಕ್ಲಬ್, ಪಬ್​ ಮತ್ತು ಕ್ಯಾಬರೆಗಳನ್ನು ತೆಗೆದಿದ್ದರೇ ಮುಚ್ಚಲೇ ಬೇಕು ಎಂದು ಹೇಳಿದರು.

ಸೇಫ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ 4 ಸಾವಿರ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಕರೆಸಿ ಉದ್ಘಾಟಿಸುತ್ತೇವೆ. ಮೊಬೈಲ್ ಫೊರೆನ್ಸಿಕ್ ಲ್ಯಾಬ್​ ಮಾಡಿದ್ದೇವೆ. ವಿಧಿವಿಜ್ಞಾನ ಪ್ರಯೋಗಾಲಯವನ್ನು ಡಿಜಿಟಲ್ ಮಾಡಲಿದ್ದೇವೆ. 50 ಜಂಕ್ಷನ್​ಗಳಲ್ಲಿ ಐಟಿಎಂಎಸ್​ ಹಾಕಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Key words: Alert – New Year –celebrations-4000 camera- Home Minister- Araga Jnanendra