ಪೋಲಾರ್ ನೈಟ್ ಆಗಮನದಿಂದಾಗಿ ಅಲಾಸ್ಕಾದ ಈ ಪಟ್ಟಣದಲ್ಲಿ ಮುಂದಿನ ೨ ತಿಂಗಳು ಸೂರ್ಯನ ಬೆಳಕೇ ಇರುವುದಿಲ್ಲ..!

kannada t-shirts

ಡಿಸೆಂಬರ್ ೧, ೨೦೨೧ (www.justkannada.in): ಉಟ್ಕಿಯಾಗ್ವಿಕ್, ಉತ್ತರ ಅಮೇರಿಕಾ ಭಾಗದಲ್ಲಿರುವ ಅಲಾಸ್ಕಾದ ಒಂದು ಸಣ್ಣ ಪಟ್ಟಣ. ಈ ಪಟ್ಟಣ ವಾರ್ಷಿಕ ಕತ್ತಲ ಮಾಸವನ್ನು ಪ್ರವೇಶಿಸಿರುವ ಕಾರಣದಿಂದಾಗಿ ಮುಂದಿನ ಸುಮಾರು ಒಂದೂವರೆ ತಿಂಗಳವರೆಗೆ ಸೂರ್ಯನ ಬೆಳಕನ್ನೇ ನೋಡುವುದಿಲ್ಲ.

ಈ ವಿಚಿತ್ರ ಹಾಗೂ ವಿಸ್ಮಯ ಮೂಡಿಸುವ ನೈಸರ್ಗಿಕ ಪ್ರಕ್ರಿಯೆಯನ್ನು ‘ಪೋಲಾರ್ ನೈಟ್’ ಎಂದು ಕರೆಯಲಾಗುತ್ತದೆ ಮತ್ತು ಇದು ಪ್ರತಿ ಚಳಿಗಾಲದಲ್ಲಿಯೂ ಸಂಭವಿಸುತ್ತದೆ.

ಅಲಾಸ್ಕಾ, ಉತ್ತರ ಅಮೇರಿಕಾ ಖಂಡದ ವಾಯುವ್ಯ ಭಾಗದಲ್ಲಿದೆ. ಅಲಾಸ್ಕಾ ಪರ್ಯಾಯದ್ವೀಪ ಪಶ್ಚಿಮ ಗೋಳಾರ್ಧದಲ್ಲಿರುವ ಅತೀ ದೊಡ್ಡ ಪರ್ಯಾಯದ್ವೀಪ (ಪೆನಿನ್ಸುಲಾ). ಇದು ಆರ್ಟಿಕ್ ಸರ್ಕಲ್‌ನ ಉತ್ತರದಲ್ಲಿದೆ. ಈ ಸಣ್ಣ ಪಟ್ಟಣ ಹಿಂದೆ ಬ್ಯಾರೋ ಎಂದು ಗುರುತಿಸಲ್ಪಡುತಿತ್ತು.

ಈ ಆಶ್ಚರ್ಯ ಪ್ರಕ್ರಿಯೆಗೆ ಕಾರಣವೇನು?

ಉಟ್ಕಿಯಾಗ್ವಿಕ್‌ನಲ್ಲಿ ನವೆಂಬರ್ ೧೯ರಂದು ಕೊನೆಯ ಬಾರಿಗೆ ಸೂರ್ಯೋದಯವಾಯಿತು. ಮುಂದಿನ ೬೦ ದಿನಗಳವರೆಗೆ ಇನ್ನು ಅಲ್ಲಿ ಸೂರ್ಯನ ಬೆಳಕೇ ಇರುವುದಿಲ್ಲ. ಈ ಪ್ರಕ್ರಿಯೆ ಪ್ರತಿ ವರ್ಷ ಚಳಿಗಾಲದಲ್ಲಿ ನಡೆಯುತ್ತದೆ. ಭೂಮಿಯ ಅಕ್ಷ (ಮಧ್ಯರೇಖೆ) ವಾಲುವುದೇ ಇದಕ್ಕೆ ಕಾರಣ.
“ಈ ನೈಸರ್ಗಿಕ ಪ್ರಕ್ರಿಯೆ ಬ್ಯಾರೊ (ಉಟ್ಕಿಯಾಗ್ವಿಕ್)ಗೆ ಮತ್ತು ಆರ್ಟಿಕ್ ವೃತ್ತದ ಒಳಗಿರುವಂತಹ ಇತರೆ ಪಟ್ಟಣಗಳಿಗೂ ಸಾಮಾನ್ಯ. ಈ ರೀತಿ ಮಧ್ಯರೇಖೆ ವಾಲುವುದರಿಂದ ಸೂರ್ಯನ ಯಾವುದೇ ಕಿರಣಗಳು ಬಾನಿನಲ್ಲಿ ಮೂಡುವುದಿಲ್ಲ,” ಎನ್ನುವುದು ಸಿಎನ್‌ಎನ್‌ನ ಹವಾಮಾನಶಾಸ್ತçಜ್ಞ ಅಲ್ಲಿಸನ್ ಚಿಂಚಾರ್‌ನ ಅಭಿಪ್ರಾಯ.

ಹಾಗಾದರೆ ಅಲ್ಲಿ ಸಂಪೂರ್ಣ ಕತ್ತಲಿರುತ್ತದೆಯೇ?

ಈ ರೀತಿಯ ನೈಸರ್ಗಿಕ ವಿಸ್ಮಯದ ಹೊರತಾಗಿಯೂ ಸಂಪೂರ್ಣವಾಗಿ ಕತ್ತಲಿರುವುದಿಲ್ಲ, ಬದಲಿಗೆ ಬೆಳಗಿನ ವೇಳೆಯಲ್ಲಿ ಪಟ್ಟಣ ಮುಸ್ಸಂಜೆಯಂತೆ ಕಾಣುತ್ತದೆ.

ಹಾಗಾದರೆ ಸೂರ್ಯೋದಯವಾಗುವುದೆಂದು?

ಸೂರ್ಯೋದಯವಾಗುವುದಕ್ಕೆ ಮುಂಚೆ ಅಥವಾ ಸೂರ್ಯ ಮುಳುಗುವ ಸಮಯಕ್ಕೆ ಮುಂಚೆ ಆಕಾಶ ಹೇಗೆ ಕಾಣುತ್ತದೆ ಎಂದು ಆಲೋಚಿಸಿ. ನವೆಂಬರ್ ೧೯ ರಿಂದ ಜನವರಿ ೨೨ರವರೆಗೆ ಆ ಸ್ಥಳದಲ್ಲಿ ಪ್ರತಿ ದಿನ ಬೆಳಗ್ಗೆ ಕೆಲವು ಗಂಟೆಗಳವರೆಗೆ ಅದೇ ರೀತಿ ಇರುತ್ತದೆ. ಜನವರಿ ೨೨ರಂದು ಸೂರ್ಯನ ಬೆಳಕು ಕಾಣುತ್ತದೆ,” ಎನ್ನುತ್ತಾರೆ ಅಲ್ಲಿಸನ್ ಚಿಂಚರ್

ಮೂಲ: ಇಂಡಿಯಾ ಟುಡೆ

key words : alaska-town-will-not-see-sunlight-for-next-2-months-as-polar-night-is-here

website developers in mysore