ಅಕ್ಷಯ ತೃತೀಯ: ಚಿನ್ನ ಬೆಲೆ ಮತ್ತೆ ಏರಿಕೆ

ಬೆಂಗಳೂರು, ಏಪ್ರಿಲ್ 24, 2020 (www.justkannada.in): ಅಕ್ಷಯ ತೃತೀಯ ಸಮೀಪಿಸುತ್ತಿರುವ ನಡುವೆಯೇ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಈ ಮೂಲಕ ಚಿನ್ನದ ಬೆಲೆ 41 ಸಾವಿರ ರೂ. ಗಡಿದಾಟಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 740 ರೂ. ಏರಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ 41,150 ರೂ.ಗೆ ಏರಿಕೆ ಕಂಡಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 697 ರೂ. ಏರಿಕೆ ಕಂಡಿದ್ದು, 44,690 ರೂ. ಆಗಿದೆ. ಈ ಮೂಲಕ ಸತತ ಎರಡು ದಿನ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆ ಕಂಡಿದೆ.

ಕಳೆದ ವಾರ ಎರಡೇ ದಿನದಲ್ಲಿ ಚಿನ್ನದ ಬೆಲೆ ಸುಮಾರು 1,500 ರೂಪಾಯಿ ಏರಿಕೆ ಕಂಡಿತ್ತು. ನಂತರ ಚಿನ್ನದ ಬೆಲೆ ಇಳಿಕೆಯಾಗಿತ್ತು. ಏಪ್ರಿಲ್ 17 ರಂದು ಒಂದೇ ದಿನ ಚಿನ್ನದ ಬೆಲೆ 990 ರೂ. ಗೆ ಇಳಿಕೆಯಾಗಿತ್ತು. ಇದೀಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ.