ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಚೇರ್ಮನ್ ಆಗಿ ಅಧಿಕಾರ ಸ್ವೀಕಾರ ಮಾಡಿದ ಆಕ್ರಂ.

Promotion

ಮೈಸೂರು,ಜೂನ್,28,2021(www.justkannada.in): ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಚೇರ್ಮನ್ ಆಗಿ  ಶಾಸಕ ಜಮೀರ್ ಅಹ್ಮದ್ ಖಾನ್ ಬಣದ ಆಕ್ರಂ ಅಧಿಕಾರ ಸ್ವೀಕರಿಸಿದರು.jk

ಮೈಸೂರಿನ ವಕ್ ಬೋರ್ಡ್ ಕಚೇರಿಯಲ್ಲಿ ಇಂದು ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಅಕ್ರಮ ಅಧಿಕಾರ ಸ್ವೀಕಾರ ಮಾಡಿದರು. ಅಧಿಕಾರ ಸ್ವೀಕಾರ ವೇಳೆ ಪಾಲಿಕೆ ಸದಸ್ಯ ಅಯೂಬ್ ಖಾನ್ ಹಾಜರಾಗಿದ್ದರು. ಈ ಮೂಲಕ ಕೊನೆಗೂ ಮೈಸೂರಿನಲ್ಲಿ ಶಾಸಕ ತನ್ವಿರ್ ಸೇಠ್ ಗೆ ಶಾಸಕ ಜಮೀರ್ ಅಹ್ಮದ್ ಖಾನ್ ಸೆಡ್ಡು ಹೊಡೆದಿದ್ದಾರೆ.

ಈ ವೇಳೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಜಮೀರ್ ಖಾನ್ ಗೆ ಆಕ್ರಂ ಕೃತಜ್ಞತೆ ತಿಳಿಸಿದ್ದಾರೆ. ನಮ್ಮಲ್ಲಿ ಯಾವುದೇ ಬಣವಿಲ್ಲ, ಸಿದ್ದರಾಮಯ್ಯ ಅವರ ಸಹಕಾರದಿಂದ ನನ್ನನ್ನ ನೇಮಕ ಮಾಡಿದ್ದಾರೆ. ಈ ಸ್ಥಾನ ನೀಡುವಂತೆ ಶಾಸಕ ತನ್ವಿರ್ ಸೇಠ್ ಗೂ ಮನವಿ ಮಾಡಿದ್ದೆ, ಅಧಿಕಾರ ಸ್ವೀಕಾರ ಬಳಿಕ ತನ್ವಿರ್ ಸೇಠ್ ರನ್ನು ಭೇಟಿ ಮಾಡಲಿದ್ದೇನೆ ಎಂದು  ವಕ್ಫ್ ಬೋರ್ಡ್ ನ ನೂತನ ಚೇರ್ಮನ್ ಆಕ್ರಂ  ಹೇಳಿದರು.

Key words: Akram- sworn -Chairman – Mysore District -Waqf Board.