EWS ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.

ಬೆಂಗಳೂರು, ನವೆಂಬರ್,7,2022(www.justkannada.in): ಆರ್ಥಿಕವಾಗಿ ಹಿಂದುಳಿದವರಿಗೆ  ಶೇ.10ರಷ್ಟು ಮೀಸಲಾತಿ ಎತ್ತಿ ಹಿಡಿದ ಸುಪ್ರೀಂಕೋರ್ಟ್ ತೀರ್ಪನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಿದ್ದಾರೆ.

ಈ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ,  ಮೀಸಲಾತಿಗೆ ಸಂಸತ್ ನಲ್ಲಿ ನಾವೆಲ್ಲೂ ಒಮ್ಮತದಿಂದ ಒಪ್ಪಿಗೆ ನೀಡಿದ್ದವು. ಮೀಸಲಾತಿಯನ್ನ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಅದನ್ನ ಸ್ವಾಗತಿಸುವೆ ಎಂದು ತಿಳಿಸಿದರು.

ಇನ್ನು ರಾಜ್ಯ ಕಾಂಗ್ರೆಸ್ ನಾಯಕರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.  ನಿನ್ನೆ ನಡೆದ ಸಮಾವೇಶದಲ್ಲೂ ನಾನು ಸ್ಪಷ್ಟಪಡಿಸಿರುವೆ.  ಒಗ್ಗಟ್ಟಾಗಿ ಎಲ್ಲಾ ನಾಯಕರೂ ಹೋರಾಟ ಮಾಡಿ ಎಂದಿದ್ದೇನೆ. ಪಕ್ಷಕ್ಕಾಗಿ ಎಲ್ಲರೂ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಎಲ್ಲಾ ನಾಯಕರು ಸಹಕಾರ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಾಳೆಯಿಂದ ಗುಜರಾತ್ ಹಿಮಾಚಲ ಪ್ರದೇಶ ಚುನವಣಾ ಪ್ರಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಗಿಯಾಗಲಿದ್ದು ಈ ಹಿನ್ನೆಲೆಯಲ್ಲಿ ನವದೆಹಲಿಗೆ ತೆರಳಿದರು.

Key words: AICC- President -Mallikarjuna Kharge –welcomes- Supreme Court -verdict – EWS reservation.