ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿದ  ಕೃಷಿ ಸಚಿವ ಬಿ.ಸಿ.ಪಾಟೀಲ್…

ಹಿರೇಕೆರೂರು, ಜೂ,29,2020(www.justkannada.in):  ಇಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮೂರನೇ ಪರೀಕ್ಷೆ ಬರೆಯುತ್ತಿದ್ದು, ಹಿರೇಕೆರೂರಿನ ಕೆ.ಎಸ್.ಪಾಟೀಲ್ ವಿದ್ಯಾಸಂಸ್ಥೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ  ಮಕ್ಕಳಲ್ಲಿ ಮನೋಸ್ಥೈರ್ಯ ತುಂಬಿದರು.

ಪರೀಕ್ಷಾ ಕೊಠಡಿಗಳು, ಸಾಮಾಜಿಕ ಅಂತರ ಪರಿಶೀಲಿಸಿದ ಸಚಿವರು ಮಕ್ಕಳಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಮಾಡಿದರು.agriculture-minister-bc-patil-inspiration-sslc-students

ಯಾವುದೇ ಮಕ್ಕಳು ಕೋವಿಡ್‌ನಿಂದ ಭಯಪಡಬಾರದು. ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಬೇಕು.ಒಂದುವೇಳೆ ವಿದ್ಯಾರ್ಥಿಗಳಲ್ಲಿ ಏನಾದರೂ ಆರೋಗ್ಯದ ಸಮಸ್ಯೆ ಕಂಡುಬಂದಲ್ಲಿ ಮೇಲ್ವಿಚಾರಕರು ಅಧಿಕಾರಿಗಳ ಗಮನಕ್ಕೆ ತರಬೇಕು.ಮಕ್ಕಳು ಸಹ ಮೇಲ್ವಿಚಾರಕರಿಗೆ ತಿಳಿಸಬೇಕು.ವಿದ್ಯಾರ್ಥಿಗಳು ಅಂಜದೇ ಹೆದರದೇ ಧೈರ್ಯವಾಗಿ ಪರೀಕ್ಷೆ ಬರೆಯಬೇಕು.ಪರೀಕ್ಷೆ ಮುಗಿದ ಬಳಿಕ ಗುಂಪಾಗಿ ಓಡಾಡುವುದಾಗಲೀ ಒಂದೆಡೆ ಸೇರದೇ ನೇರವಾಗಿ ತಮ್ಮತಮ್ಮ ನಿವಾಸಗಳಿಗೆ ಅಥವಾ ತಂಗಿರುವ ಸ್ಥಳಗಳಿಗೆ ಸಾಮಾಜಿಕ ಅಂತರದಲ್ಲಿಯೇ ಸಾಗಬೇಕು. ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು.ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಮನೋಸ್ಥೈರ್ಯ ತುಂಬಿ ಮಕ್ಕಳ ಪರೀಕ್ಷೆಗೆ ಶುಭಕೋರಿದರು.

Key words: Agriculture Minister- BC Patil-inspiration – SSLC- students.