ಪ್ರತಿಭಟನೆ ಹತ್ತಿಕ್ಕುವ ನಿಮ್ಮ ತಂತ್ರ ಫಲಿಸಲ್ಲ-ರಾಜ್ಯಸಭೆಯಲ್ಲಿ ಕೇಂದ್ರದ ವಿರುದ್ದ ಮಲ್ಲಿಕಾರ್ಜುನ ಖರ್ಗೆ ಕಿಡಿ…

ನವದೆಹಲಿ,ಫೆಬ್ರವರಿ,5,2021(www.justkannada.in): ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳು ರೈತರ ಪರವಿಲ್ಲ. ಹೀಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ನಿಮ್ಮ ತಂತ್ರ ಫಲಿಸಲ್ಲ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.jk

ರಾಜ್ಯಸಭೆಯಲ್ಲಿ ಇಂದು ಈ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನೀವು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿದ್ದು, ಹೀಗಾಗಿ ಅನ್ನದಾತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹತ್ತಿಕ್ಕುವ ನಿಮ್ಮ ತಂತ್ರ ಫಲಿಸಲ್ಲ. ರೈತ ವಿರೋಧಿ ಕಾನೂನುಗಳನ್ನ ಹಿಂಪಡೆಯಿರಿ ಎಂದು ಆಗ್ರಹಿಸಿದರು.Agricultural Amendment Act- Not – farmers-Rajya Sabha-member- Mallikarjuna kharge

ಕೆಂಪುಕೋಟೆ ಮತ್ತಿಗೆಯನ್ನ ಖಂಡಿಸುತ್ತೇವೆ. ಕೆಂಪುಕೋಟೆ ಮುತ್ತಿಗೆ ಘಟನೆಯೂ ಕುತಂತ್ರದ ಕೃತ್ಯ. ಈ ಘಟನೆಯನ್ನ ನಾವು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Key words: Agricultural Amendment Act- Not – farmers-Rajya Sabha-member- Mallikarjuna kharge