ಮೂರು ಕಾಯ್ದೆಗಳನ್ನ ಕೈ ಬಿಡಲು ಆಗ್ರಹ: ಬೆಂಗಳೂರಿನಲ್ಲಿ ರೈತರಿಂದ ಪ್ರತಿಭಟನಾ ರ್ಯಾಲಿ…

ಬೆಂಗಳೂರು,ಸೆಪ್ಟಂಬರ್,21,2020(www.justkannada.in): ಭೂ ಸುಧಾರಣಾ ಕಾಯ್ದೆ ತಿದ್ಧುಪಡಿ, ಎಂಪಿಎಂಸಿ ಕಾಯ್ದೆ, ಮತ್ತು ವಿದ್ಯುತ್ ಕಾಯ್ದೆ  ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ರೈತ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನಾ ರ್ಯಾಲಿ ನಡೆಸುತ್ತಿವೆ.

ಮೂರು ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ನಗರದ ಮೆಜೆಸ್ಟಿಕ್ ನಿಂದ ಫ್ರೀಡಂಪಾರ್ಕ್ ವರೆಗೆ  ರೈತರು ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದು, ಅಧಿವೇಶನ ಮುಗುಯುವವರೆಗೂ ಆಹೋರಾತ್ರಿ ಧರಣಿ ನಡೆಸಲು  ನಿರ್ಧರಿಸಿದ್ದಾರೆ. ರೈತರ ಪ್ರತಿಭಟನೆ ರ್ಯಾಲಿ ಹಿನ್ನೆಲೆ ಮೆಜೆಸ್ಟಿಕ್ ಮತ್ತು ಫ್ರೀಡಂ ಪಾರ್ಕ್ ಬಳಿ 500ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ.against-the-government-leave-land-reform-act-protest-farmers-bangalore

ಪ್ರತಿಭಟನಾ ರ್ಯಾಲಿಯಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳು  ಭಾಗಿಯಾಗಿದ್ದು, ಭೂ ಸುಧಾರಣಾ ಕಾಯ್ದೆ ತಿದ್ಧುಪಡಿ, ಎಂಪಿಎಂಸಿ ಕಾಯ್ದೆ, ಮತ್ತು ವಿದ್ಯುತ್ ಕಾಯ್ದೆ ಕೈಬಿಡುವಂತೆ ಆಗ್ರಹಿಸಿವೆ. ಕಾಯ್ದೆಗಳನ್ನ ಕೈಬಿಡದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

Key words: against the -government leave – Land Reform Act- protest-farmers – Bangalore.