ಫಲಿತಾಂಶ ಬಳಿಕ ಬಿಜೆಪಿ ಸರ್ಕಾರ ಮತ್ತಷ್ಡು ಸುಭದ್ರ: ನೂರಕ್ಕೆ ನೂರು ಮೈತ್ರಿ ಸರ್ಕಾರ ರಚನೆ ಆಗಲ್ಲ- ಎಸ್.ಟಿ ಸೋಮಶೇಖರ್ ನುಡಿ…

ಬೆಂಗಳೂರು,ಡಿ,2,2019(www.justkannada.in): ಫಲಿತಾಂಶ ಬಂದ ಬಳಿಕ ಬಿಜೆಪಿ ಸರ್ಕಾರ ಮತ್ತಷ್ಡು ಸುಭದ್ರವಾಗತ್ತೆ. ನೂರಕ್ಕೆ ನೂರು ಮತ್ತೆ ಮೈತ್ರಿ ಸರ್ಕಾರ ರಚನೆ ಆಗಲ್ಲ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್  ನುಡಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ಅಭ್ಯರ್ಥಿ ಎಸ್. ಟಿ ಸೋಮಶೇಖರ್, ಫಲಿತಾಂಶ ಬಂದ ಬಳಿಕ ಬಿಜೆಪಿ ಸರ್ಕಾರ ಮತ್ತಷ್ಡು ಸುಭದ್ರವಾಗತ್ತೆ. ಅವಕಾಶ ಇದ್ದಾಗಲೇ ಮೈತ್ರಿ ಸರ್ಕಾರದಲ್ಲಿ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಈಗ ಮತ್ತೆ ಮೈತ್ರಿ ಅನ್ನೋದೆಲ್ಲ ಸುಳ್ಳು. ಕೇವಲ ಮತದಾರರನ್ನು ಹಾದಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಈಗಂತೂ ಸಿಎಂ ಹುದ್ದೆ ಖಾಲಿ ಇಲ್ಲ, ಕಾಂಗ್ರೆಸ್ ಜೆಡಿಎಸ್ ನವರಿಗೆ ಆ ಅವಕಾಶವೂ ಇಲ್ಲ ಎಂದರು.

ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಟ್ಯಾಪ್ ಮಾಡಿಸಿದ್ದು ತಪ್ಪು…

ಮೈತ್ರಿ ಸರ್ಕಾರ ಇದ್ದಾಗ ನನ್ನ ಮುನಿರತ್ನ ಫೋನ್ ಟ್ಯಾಪ್ ಮಾಡಿಸಿದ್ರು. ನಾವು ರಾಜಕಾರಣಿಗಳು, ನಮ್ಮ  ಮನೆ ಫೋನಾದ್ರೂ ಟ್ಯಾಪ್ ಮಾಡಲಿ ಏನಾದ್ರೂ ಮಾಡಿಕೊಳ್ಳಲಿ. ನಿರ್ಮಲಾನಂದ ಸ್ವಾಮಿಜಿ ಫೋನ್ ಟ್ಯಾಪ್‌ ಕೂಡ ಹಿಂದಿನ ಸಿಎಂ ಮಾಡಿಸಿದ್ರು. ನಮ್ಮ ಒಕ್ಕಲಿಗ ಸಮುದಾಯದ ಸ್ವಾಮಿಜಿ ಫೋನ್ ಟ್ಯಾಪ್ ಮಾಡಿಸಿದ್ದೂ ಸರಿಯಲ್ಲ. ನಿರ್ಮಲಾನಂದನಾಥ ಸ್ವಾಮೀಜಿ ಒಂದು ಪಕ್ಷಕ್ಕೆ ಸೀಮೀತರಾದವರಲ್ಲ. ಅವರ ಫೋನ್ ಕೂಡ ಟ್ಯಾಪ್ ಮಾಡಿಸಿದ್ದು ತಪ್ಪು ಎಂದು ಎಸ್.ಟಿ ಸೋಮಶೇಖರ್ ಕಿಡಿಕಾರಿದರು.

ನೂರಕ್ಕೆ ನೂರು ಮೈತ್ರಿ ಸರ್ಕಾರ ರಚನೆ ಆಗೋದಿಲ್ಲ. ಮೈತ್ರಿ ಸರ್ಕಾರ ಇದ್ದಾಗ ಕಿತ್ತಾಡಿಕೊಂಡರು. ಇವರು ಅವರ ಬಗ್ಗೆ ಆರೋಪ ಮಾಡಿದ್ರು, ಅವರು ಇವರ ಬಗ್ಗೆ ಆರೋಪ ಮಾಡಿದ್ರು. ಈಗ ಮತ್ತೆ ಮೈತ್ರಿ ಅನ್ನೋದು ಯಾವ ದೃಷ್ಟಿಯಿಂದ..? ಎಂದು ಸೋಮಶೇಖರ್ ಪ್ರಶ್ನಿಸಿದರು.

Key words: After – result- BJP govt-secure-bjp candidate-ST Somashekhar.