ಭರ್ಜರಿ ಗೆಲುವಿನ ಬಳಿಕ ಗುಜರಾತ್ ಬಿಜೆಪಿಯಲ್ಲಿ ಭಿನ್ನಮತದ ಪ್ರತಿಧ್ವನಿ

ಬೆಂಗಳೂರು, ಡಿಸೆಂಬರ್ 18, 2022 (www.justkannada.in): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಸಂಭ್ರಮದ ಬಳಿಕ ಭಿನ್ನಮತದ ಪ್ರತಿಧ್ವನಿ ಸದ್ದು ಮಾಡುತ್ತಿದೆ.

ಸತತ 7ನೇ ಬಾರಿ ಸರ್ಕಾರ ರಚಿಸಿದ ಹೆಗ್ಗಳಿಕೆ ಬಳಿಕ ಕೇಸರಿಪಡೆಯಲ್ಲಿ ಭಿನ್ನಮತದ ಪ್ರತಿಧ್ವನಿ ಎದ್ದಿದೆ.

ಆಂತರಿಕ ಭಿನ್ನಾಭಿಪ್ರಾಯದ ಕಿಚ್ಚಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಜಿ ರಾಜ್ಯ ಸಚಿವ ನಾಣು ವನನಿ ಅವರು ಮಾಡಿದ್ದು ಬಹಿರಂಗ ಪತ್ರ ಬರೆದಿದ್ದಾರೆ.

ಈ ಬಾರಿ ಕಡಿಮೆ ಮತದಾನವಾಗಿರುವ ಬಗ್ಗೆ ಹಾಗೂ ಬಿಜೆಪಿಯ ಕಾರ್ಯವೈಖರಿ ಬಗ್ಗೆ ವನಾನಿ ಕಳವಳ ವ್ಯಕ್ತಪಡಿಸಿದ್ದಾರೆ. ಪಕ್ಷವು ತನ್ನ ಕಾರ್ಯಚಟುವಟಿಕೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂದಿದ್ದಾರೆ.

ಇದೇ ಪ್ರಶ್ನೆಯನ್ನು ಇತರ ಬಿಜೆಪಿ ನಾಯಕರು ಎತ್ತಿದ್ದಾರೆ. ಕಾಂಕ್ರೇಜ್ನಲ್ಲಿ ಸೋತ ಕೀರ್ತಿಸಿನ್ಹ ವಘೇಲಾ, ಸ್ಥಳೀಯ ನಾಯಕರು ಪಕ್ಷದ ವಿರುದ್ಧ ಕೆಲಸ ಮಾಡಿದ್ದರಿಂದ ತಾವು ಪರಾಜಯ ಕಂಡಿದ್ದೇನೆ ಎಂದಿದ್ದಾರೆ.