ಮೈಸೂರು ಮೃಗಾಲಯಕ್ಕೆ ‘ಆಫ್ರಿಕನ್ ಹಂಟಿಂಗ್ ಚಿರತೆ’ ಆಗಮನ….

ಮೈಸೂರು,ಆಗಸ್ಟ್,18,2020(www.justkannada.in):  ದಕ್ಷಿಣ ಆಫ್ರಿಕಾದ ಆನ್ ವ್ಯಾನ್ ಡೈಕ್ ಚಿರತೆ ಕೇಂದ್ರದಿಂದ 1:2 ಆಫ್ರಿಕನ್ ಹಂಟಿಂಗ್ ಚಿರತೆಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ.African -Hunting –Leopard- arrives -Mysore Zoo

ಭಾರತದಲ್ಲಿ ಆಫ್ರಿಕನ್ ಹಂಟಿಂಗ್ ಚಿರತೆಗಳು ಕೇವಲ ಎರಡು ಮೃಗಾಲಯಗಳಲ್ಲಿ ಇದ್ದು ಅದರಲ್ಲಿ ಮೈಸೂರು ಮೃಗಾಲಯವೂ ಒಂದಾಗಿದೆ. ಈ ಹಿಂದೆ ಮೈಸೂರು ಮೃಗಾಲಯದಲ್ಲಿ 2011ರಿಂದ 2019ರವರೆಗೆ  ಆಫ್ರಿಕನ್ ಹಂಟಿಂಗ್ ಚಿರತೆಗಳನ್ನ ಇರಿಸಲಾಗಿತ್ತು.African -Hunting –Leopard- arrives -Mysore Zoo

ಈ ಕುರಿತು ಪ್ರತಿಕ್ರಿಯಿಸಿರುವ ಚಾಮರಾಜೇಂದ್ರ ಮೃಗಾಲಯದ  ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಇವುಗಳ ಆಗಮನದಿಂದ ವೀಕ್ಷಕರಿಗೆ ಅಳಿವಿನಂಚಿನಲ್ಲಿರುವ ಆಫ್ರಿಕಾದ ಬೆಕ್ಕಿನ ಜಾತಿಯ ಈ ಪ್ರಾಣಿಯನ್ನು ನೋಡಲು  ಅವಕಾಶ ಸಿಕ್ಕಿದೆ. ಭೇಟೆ ಚಿರತೆಗಳು ಸೇರಿದಂತೆ ಒಟ್ಟು 5 ಪ್ರಭೇದದ  ದೊಡ್ಡ ಬೆಕ್ಕುಗಳನ್ನು ಮೈಸೂರು ಮೃಗಾಲಯ ಹೊಂದಿದೆ. ಈ ವೇಗದ ಭೂ ಸಸ್ತನಿಗಳು ಕ್ವಾರಂಟೈನ್ ಅವಧಿಯು ಮುಗಿದ ನಂತರ ವೀಕ್ಷಕರ ವೀಕ್ಷಣೆಗೆ ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದರು.African -Hunting –Leopard- arrives -Mysore Zoo

Key words: African -Hunting –Leopard- arrives -Mysore Zoo