ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸಂಬಂಧಿಸಿದಂತೆ ಶೀಘ್ರ ಸರಕಾರಕ್ಕೆ ಸಲಹಾ ವರದಿ: ಪ್ರೊ.ಕೆ.ಎಸ್.ರಂಗಪ್ಪ

kannada t-shirts

ಮೈಸೂರು,ಅಕ್ಟೋಬರ್,15,2022(www.justkannada.in):  ರಾಷ್ಟ್ರೀಯ ಶಿಕ್ಷಣ ನೀತಿ  ಒಳ್ಳೆಯ ಯೋಜನೆ. ಹಾಗಾಗಿ, ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಲಾಗುವುದು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.

ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ, ಮೈಸೂರು ವಿವಿಯ ಅಲುಮ್ನಿ ಅಸೋಸಿಯೇಷನ್ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಹೇಳಿದಿಷ್ಟು.

ರಾಷ್ಟ್ರಕ್ಕೆ ಎನ್ ಇಪಿ ವ್ಯವಸ್ಥೆ ಚೆನ್ನಾಗಿದೆ. ಆದರೆ, ಇದರ ಅನುಷ್ಠಾನ ಆಗಿ ಒಂದೂವರೆ ವರ್ಷ ಆದರೂ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ಕೊಟ್ಟಿಲ್ಲ. ಹಲವು ವಿವಿಗಳಲ್ಲಿ ಅಧ್ಯಾಪಕರ ಕೊರತೆ ಇದೆ. ಹಾಗಾಗಿ ನಮ್ಮ ಫೋರಂನಿಂದ ಎನ್ ಇಪಿ ಅನುಷ್ಠಾನ ಸಂಬಂಧ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದಾರೆ. ಅವರ ಅಭಿಪ್ರಾಯ ಪಡೆದು ಸರಕಾರಕ್ಕೆ ವರದಿ ನೀಡುತ್ತೇವೆ. ರಾಮಗೌಡರು ವರದಿ ತಯಾರಿಸಿ ಸರಕಾರದ ಮುಂದಕ್ಕೆ ಕೊಡುತ್ತಾರೆ. ಸಂಶೋಧನೆ, ಶಿಕ್ಷಣದ ಗುಣಮಟ್ಟದ ಸೇರಿದಂತೆ ಮುಂತಾದ ಸಂಗತಿ ಬಗ್ಗೆಯೂ ನಮ್ಮ ಪೋರಂನಿಂದ ಚರ್ಚೆ ಮಾಡುತ್ತೇವೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಮಾತನಾಡಿ, 2019ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಕಾರ್ಯಾಗಾರ ಮಾಡಿದ್ದೆ. ಕಸ್ತೂರಿ ರಂಗನ್ ಅವರನ್ನು ಕರೆಸಲಾಗಿತ್ತು.

ಪದವಿಯಲ್ಲಿದ್ದ ಮೂರು ವಿಷಯದಿಂದ ಎರಡು ವಿಷಯಕ್ಕೆ ಇಳಿಯುವುದು ಸವಾಲಿನ ವಿಷಯ ಅಗಿತ್ತು. ಎನ್ ಇಪಿ ಮುಖ್ಯ ಉದ್ದೇಶ ಎಂದರೆ ಟಾಪ್ 100 ರೊಳಗೆ ನಮ್ಮ‌ದೇಶದ ವಿವಿ ಬರಬೇಕು. ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ನೀಡಬೇಕು. ಕೌಶಲ್ಯಗಳನ್ನು ತಿಳಿಸಬೇಕು. ಒಂದೊಳ್ಳೆ ಯೋಜನೆ ಇದು. ಬಹುಶಿಸ್ತೀಯ ಅಂಶಗಳು ಇದರಲ್ಲಿ ಅಡಕವಾಗಿದೆ ಎಂದರು.

ಬೇರೆ ಕೋರ್ಸ್ ಓದುವುದು ಕಷ್ಟ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಇದೆ. ಇದನ್ನು ನಿವಾರಣೆ ಮಾಡಬೇಕು. ‌ಸರಕಾರ‌ ಪಾಲಿಸಿ ಅನುಷ್ಠಾನ ತಂದರೆ ಸಾಲದು. ಅದನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರಬೇಕು.‌ ಶೇ.1.5 ಜಿಡಿಪಿಯನ್ನು ಇದೀಗ ಸರಕಾರ ನೀಡುತ್ತಿದೆ. ಅದು ಶೇ.6 ರಷ್ಟು ಆಗಬೇಕು. ‌ಸಂಪನ್ಮೂಲ ಹಾಗೂ ಸೌಕರ್ಯ ಕಾಲೇಜುಗಳಿಗೆ ನೀಡಬೇಕು ಎಂದು ಹೇಳಿದರು.

ವಿಶ್ರಾಂತ ಕುಲಪತಿ ಎಸ್.ಎನ್.ಹೆಗ್ಡೆ ಮಾತನಾಡಿ, ಇದು ಎರಡು ವರ್ಷಸ ಪಾಲಿಸಿ ಅಲ್ಲ.‌ 15 ವರ್ಷದ ಪಾಲಿಸಿ. ಇದನ್ನು ಎಲ್ಲಾ ಕಾಲೇಜುಗಳಲ್ಲಿ ಅನುಷ್ಠಾನಕ್ಕೆ ತರಬೇಕು.‌ ಇದು ಒಳ್ಳೆಯ ಯೋಜನೆ. ಆದರೆ ಅದಕ್ಕೆ ತಯಾರಿ ಆಗಿದೆಯಾ? ರಾಜಕೀಯ ಧೋರಣೆ ಶಿಕ್ಷಣ ಕ್ಷೇತ್ರಕ್ಕೆ ಕಾಲಿಡಬಾರದು. ಈ ಯೋಜನೆ ಅನುಷ್ಠಾನಕ್ಕೆ ಬೇಕಾದ ಶಿಕ್ಷಕರು ಎಲ್ಲಿದ್ದಾರೆ? ಸೌಕರ್ಯ ಎಲ್ಲಿದೆ? ಇದನ್ನೆಲ್ಲ ಸರಕಾರ ಗಮನಿಸಬೇಕು. ಇಂತಹ ಕಾರ್ಯಾಗಾರ ಹೆಚ್ಚು ನಡೆಯಬೇಕು. ಕಲಾ, ವಿಜ್ಞಾನ, ವಾಣಿಜ್ಯ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸಂಗ್ರಹಿಸಿ ಸರಕಾರಕ್ಕೆ ಕೊಡಬೇಕು ಎಂದರು.

ವಿಶ್ರಾಂತ ಕುಲಪತಿ ಎನ್. ಎಸ್. ರಾಮೇಗೌಡ ಅವರು ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಇಲ್ಲಿ ಬಂದಿದ್ದಾರೆ. ಇವರು ತಮ್ಮ ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ವಿಷಯ ತಿಳಿಸುತ್ತಾರೆ. ಮೂರು ವಿಭಾಗದ ಗುಂಪು ಮಾಡಲಾಗಿದೆ. ಕ್ರೆಡಿಟ್ ಕೊಡಲಾಗಿದೆ. ಮೌಲ್ಯಮಾಪನ ಮಾಡಬೇಕು. ಸಂಪನ್ಮೂಲ ವ್ಯಕ್ತಿಗಳು ಮಾತನಾಡಲಿದ್ದಾರೆ. ನಂತರ ಈ ವರದಿಯನ್ನು ಸರಕಾರಕ್ಕೆ ನೀಡಲಾಗುತ್ತದೆ ಎಂದರು. ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್.ಶ್ರೀಕಂಠಸ್ವಾಮಿ, ಪ್ರೊ.ಸಿ.ನಾಗಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Key words: advisory- report – Government – implementation – NEP-Prof. K. S. Rangappa

website developers in mysore