2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಲಹಾ ಸಮಿತಿ ರಚನೆ.

kannada t-shirts

ಬೆಂಗಳೂರು,ಸೆಪ್ಟಂಬರ್,30,2021(www.justkannada.in):  ಪ್ರತಿ ವರ್ಷ ರಾಜ್ಯ ಸರ್ಕಾರದ ವತಿಯಿಂದ ಕನ್ನಡ ರಾಜ್ಯೋತ್ಸವ ದಿನದಂದು ನೀಡಲಾಗುತ್ತಿರುವ ರಾಜ್ಯೋತ ಪ್ರಶಸ್ತಿಗೆ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರನ್ನು ಗುರುತಿಸಿ ಆಯ್ಕೆ ಮಾಡಲು ಸಲಹಾ ಸಮಿತಿಯನ್ನು ರಚಿಸಲಾಗಿದೆ.

2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ 30 ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ. ಈ ವರ್ಷ 66 ಸಾಧಕರನ್ನು ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ.

ಈ ಸಂಬಂಧ ಸಾರ್ವಜನಿಕರಿಗೆ ಕೂಡ ಸಾಧಕರ ಹೆಸರನ್ನು ಆನ್‌ಲೈನ್ ವೇದಿಕೆಯ ಮೂಲಕ ಶಿಫಾರಸು ಮಾಡಲು ಅವಕಾಶ ನೀಡಲಾಗಿದೆ.  ಅ.15 ಶಿಫಾರಸು ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ.

ಸಲಹಾ ಸಮಿತಿ ಸದಸ್ಯರು ಈ ಕಳಕಂಡಂತಿದ್ದಾರೆ.  

ಸಮಿತಿಯ ಸದಸ್ಯರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಎನ್ .ಎಸ್ ಸೇತುರಾಮ್, ದಾದಾ ಕಲಂದರ್, ಅವಿನಾಶ್, ಕೆ.ಎಸ್ ಜಯಂತ್, ಘಮಶ್ಯಾಮ್ ಬಾಂಡಗೆ,ಡಾ.ಈರೇಶಿ,ಶಂಭುಲಿಂಗಪ್ಪ, ಶಿವಣ್ಣ, ನಾಗರಾಜ್ ನಾಯಕ್,ಡಾ. ನೇಮಿ ಚಂದ್ರ, ಬಾಬುರಾವ್ ಮುಡಬಿ,ವನಜಾ ಶ್ರೀರಾಮ್, ಇ.ಪ್ರೇಮ, ಹರೀಶ್ ಶ್ರಿರಾಮ್,ಡಾ.‌ಬಿವಿ‌ವಸಂತ್ ಕುಮಾರ್, ನಾಡೋಜ ಡಾ.ಕೃಷ್ಣ ಪ್ರಸಾದ್, ವಿ.‌ಮನೋಹರ್, ಪ್ರೊ ಎನ್.ಎಸ್ ಪಾಟೀಲ್, ಮೋಹನ್ ಅಳ್ವ, ಎಂಪಿ ಗಣೇಶ್, ಬ್ರೆಗೇಡಿಯರ್ ಪೂರ್ವಿ ಮಠ, ಟೈಗರ್ ಅಶೋಕ್ ಕುಮಾರ್, ಮಹೇಶ್ವರನ್, ಡಾ.ಶಿವಲಿಂಗಯ್ಯ ಸೇರಿದಂತೆ ಹಲವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Key words: Advisory Committee-Rajyotsava Award –Selection- 2021

website developers in mysore