‘ರಾಂಗಿ’ ಚಿತ್ರಕ್ಕಾಗಿ ಕೈಯಲ್ಲಿ ಗನ್ ಹಿಡಿದ ತ್ರಿಷಾ !

ಮುಂಬೈ, ಆಗಸ್ಟ್20, 2019 (www.justkannada.in): ನಟಿ ತ್ರಿಷಾ ಆಯಕ್ಷನ್‌ ಥ್ರಿಲ್ಲರ್‌ ‘ರಾಂಗಿ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣವು ಸೆಪ್ಟೆಂಬರ್‌’ನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆಯಲಿದೆ. ಈ ಚಿತ್ರವನ್ನು ಎಂ.ಶರವಣನ್‌ ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಪೋಸ್ಟರ್‌ವೊಂದನ್ನು ಚಿತ್ರತಂಡ ಹಂಚಿಕೊಂಡಿತ್ತು. ಅದರಲ್ಲಿ ತ್ರಿಷಾ ಕೈಯಲ್ಲಿ ಗನ್‌ ಹಿಡಿದುಕೊಂಡಿದ್ದು, ಚಿತ್ರದ ಕತೆ ಬಗ್ಗೆ ಕುತೂಹಲ ಕೆರಳಿಸಿದೆ.