ಇನ್‍ಸ್ಟಾಗ್ರಾಂನಲ್ಲಿ ವಾಸ್ತವ ಲೋಕ ತೆರೆದಿಟ್ಟ ಸಿಂಧು ಪೋಸ್ಟ್ !

Promotion

ಬೆಂಗಳೂರು, ಜೂನ್ 18, 2020 (www.justkannada.in): ಇನ್‍ಸ್ಟಾಗ್ರಾಂನಲ್ಲಿ ನಟಿ ಸಿಂಧು ಲೋಕ್‍ನಾಥ್ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.

ನಾನು ತೆರೆಯ ಮೇಲಷ್ಟೆ ನಟಿ. ತೆರೆಯ ಹಿಂದೆ ಅಲ್ಲ. ನಾನು ಜೀವನದಲ್ಲಿ ಮಾಡುವುದೆಲ್ಲವೂ ನಟನೆ ಅಲ್ಲ. ನಾನೂ ಸಹ ಎಲ್ಲರಂತೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತೇನೆ. ಭಾವನೆಗಳನ್ನು ಸುಳ್ಳು, ನಕಲಿ ಮಾಡಲಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ನಾನು ಭಯಪಡುತ್ತೇನೆ. ನಾನು ಕಷ್ಟಪಡುತ್ತೇನೆ, ನನಗೂ ನೋವಾಗುತ್ತದೆ, ಅಳುತ್ತೇನೆ, ನಾನು ಕೂಡ ಸಂತೋಷ ಮತ್ತು ನೋವನ್ನು ಸಮಾನವಾಗಿ ಅನುಭವಿಸುತ್ತೇನೆ” ಎಂದಿದ್ದಾರೆ ಈ ಲವ್ ಇನ್ ಮಂಡ್ಯ ನಟಿ!

ನಾನು ಸಿನಿಮಾ ನಟಿ ಆಗಿರುವುದರಿಂದ ಸಾಮಾನ್ಯ ಮನುಷ್ಯಳಲ್ಲವೆಂದು ನಿಮಗೆ ಕಾಣಿಸಬಹುದು. ಆದರೆ ಆಳದಲ್ಲಿ ನಾನು ಸಾಮಾನ್ಯಳು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮಂತೆ ನಾನೂ ಸಹ ಒಬ್ಬ ಸಾಮಾನ್ಯ ಮನುಷ್ಯಳು ಎಂದು ಸಿಂಧು ಬರೆದುಕೊಂಡಿದ್ದಾರೆ. ಆದರೆ ಇದಕ್ಕಿಂದಂತೆ ಈ ರೀತಿ ಬರೆದುಕೊಳ್ಳಲು ಕಾರಣವೇನು ಎಂಬುದು ಮಾತ್ರ ರಹಸ್ಯ!