ತೇಜಸ್ವಿ ಸೂರ್ಯ ಬುರುಡೆಯಲ್ಲಿ ಮೆದುಳೆ ಇಲ್ಲ: ಇನ್ಸ್ಟಾಗ್ರಾಮ್ ನಲ್ಲಿ ನಟಿ ರಮ್ಯಾ ಟೀಕೆ

Promotion

ಬೆಂಗಳೂರು, ಡಿಸೆಂಬರ್ 29, 2021 (www.justkannada.in): ನಟಿ ರಮ್ಯಾ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.

ತೇಜಸ್ವಿ ಸೂರ್ಯ ಬುರುಡೆಯಲ್ಲಿ ಮೆದುಳೆ ಇಲ್ಲ ಎಂದು ಟೀಕಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನ ಸ್ಟೋರೀಸ್ ನಲ್ಲಿ ಈ ಸಂಬಂಧ ಪೋಸ್ಟ್ ಹಾಕಿದ್ದು, ತೇಜಸ್ವಿ ಹೇಳಿಕೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಮುಸ್ಲಿಮರು, ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ ಎಂದಿದ್ದರು. ಈ ಹೇಳಿಕೆಗೆ ಬಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ತೇಜಸ್ವಿ ಸೂರ್ಯ ಕೂಡ ಕ್ಷಮೆ ಕೇಳಿದ್ದರು. ಈ ಸಂಬಂಧ ನಟಿ ರಮ್ಯಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.