ನಾನ್ ವೆಜ್’ಗೆ No ಎಂದ ರಮ್ಯಾ !

ಬೆಂಗಳೂರು, ಜನವರಿ 02, 2021 (www.justkannada.in): 

ಹೊಸ ವರ್ಷದಿಂದ ಮಾಂಸ ತಿನ್ನುವುದನ್ನು ತ್ಯಜಿಸಲಿದ್ದೇನೆ ಎಂದಿದ್ದಾರೆ ಮಾಜಿ ಸಂಸದೆ, ನಟಿ ರಮ್ಯಾ.

ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ವಿಡಿಯೋ ಒಂದನ್ನು ಶೇರ್​ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ರಮ್ಯಾ ಇತ್ತೀಚೆಗೆ ತುಂಬಾ ಆಯಕ್ಟಿವ್ ಆಗಿದ್ದಾರೆ. ಅಲ್ಲದೆ ಹೊಸ ಹೊಸ ವಿಷಯಗಳನ್ನು ಶೇರ್​ ಮಾಡುತ್ತ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ.

ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ವಿಡಿಯೋ ಒಂದನ್ನು ಶೇರ್​ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​​ ಮಾಡಿರುವ ನಟಿ, ‘ಈ ವರ್ಷದ ಆರಂಭದಲ್ಲಿ ನಾನು ಸಸ್ಯಾಹಾರಿಯಾಗಿ ಬದಲಾಗಿದ್ದೇನೆ. ಇದು ನಾನು ತೆಗೆದುಕೊಂಡ ಉತ್ತಮ ನಿರ್ಧಾರ ಎಂದಿದ್ದಾರೆ.