ಪಾಕ್’ಗೆ ಪಂಚ್ ನೀಡಿದ ಪಾರುಲ್ ಯಾದವ್ ವೀಡಿಯೋ !

ಚೆನ್ನೈ, ಜೂನ್ 17, 2019 (www.justkannada.in): ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿದ ವಿಜಯೋತ್ಸವದಲ್ಲಿ ನಟಿ ಪಾರೂಲ್ ಯಾದವ್ ಪಾಕಿಸ್ತಾನಕ್ಕೆ ಪಂಚ್ ನೀಡಿದ್ದಾರೆ !

ಕೆಲ ದಿನಗಳ ಹಿಂದೆ ಪಾಕಿಸ್ತಾನ ಮಾಧ್ಯಮವೊಂದು ಭಾರತವನ್ನ ಹೀಯಾಳಿಸುವ ರೀತಿ ಜಾಹೀರಾತು ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು.

ಅಭಿನಂದನ್ ರೀತಿಯ ಮೀಸೆ ಧರಿಸಿ ಅದೇ ಜಾಹಿರಾತಿನ ಮೂಲಕ ಪಾಕಿಸ್ತಾನಕ್ಕೆ ಪಂಚ್ ನೀಡಿದ್ದಾರೆ. ಟೀ ಕಪ್ ನೀವೆ ಇಟ್ಟುಕೊಳ್ಳಿ, ನಾವು ವರ್ಲ್ಡ್ ಗೆಲ್ಲುತ್ತೇವೆ ಎಂದು ಪಾರೂಲ್ ಉತ್ತರ ನೀಡಿದ್ದಾರೆ. ಪಾರೂಲ್ ಸ್ನೇಹಿತರ ಜೊತೆ ಗೂಡಿ ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾ ವೀಕ್ಷಿಸಿದ್ದಾರೆ.