ವಜ್ರಕಾಯ ‘ಪಟ್ಹಾಕಾ’ ಸಂಭಾವನೆ ಕೇಳಿದ ನಿರ್ಮಾಪಕರಿಗೆ ಶಾಕ್ ಆಯ್ತಂತೆ!

ಬೆಂಗಳೂರು, ಜನವರಿ 23, 2019 (www.justkannada.in): ‘ವಜ್ರಕಾಯ’ ಬೆಡಗಿ, ನಟಿ ನಭಾ ನಟೇಶ್ ಸಂಭಾವನೆಯನ್ನ ಕೇಳಿ ಟಾಲಿವುಡ್ ನಿರ್ಮಾಪಕರು ಅಕ್ಷರಶಃ ಶಾಕ್ ಆಗಿದ್ದಾರಂತೆ!

ಚಿತ್ರವೊಂದರಲ್ಲಿ ನಟಿಸಲು ನಟಿ ನಭಾ ನಟೇಶ್ ನಿರ್ಮಾಪಕರ ಮುಂದೆ ಬರೋಬ್ಬರಿ 80 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರಂತೆ. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಟಾಲಿವುಡ್ ನಲ್ಲಿ ನಭಾ ನಟೇಶ್ ನಟಿಸಿರುವುದು ಕೇವಲ ಎರಡ್ಮೂರು ಚಿತ್ರಗಳು. ಒಂದೆರಡು ಹಿಟ್ ಕೊಡುತ್ತಿದ್ದಂತೆಯೇ ನಭಾ ನಟೇಶ್ ತಮ್ಮ ಸಂಭಾವನೆಯನ್ನ ಹೈಕ್ ಮಾಡಿಕೊಂಡುಬಿಟ್ಟಿದ್ದಾರೆ.