ಹೋಮ ಮಾಡಿ ಕೊರೊನಾದಿಂದ ದೂರವಿರಿ ಎಂದ ಹೇಮಾ !

Promotion

ಬೆಂಗಳೂರು, ಜೂನ್ 08, 2021 (www.justkannada.in): ಕೊರೋನಾ ನಿಯಂತ್ರಣಕ್ಕಾಗಿ ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ನೀಡಿದ್ದ ಸಲಹೆ ಸಾಕಷ್ಟು ಟೀಕೆಗೆ ಗುರಿಯಾಗಿದೆ,

ಪ್ರತಿದಿನ ಹೋಮ- ಹವನ ಮಾಡುವುದರಿಂದ ಕೊರೋನಾ ವೈರಸ್ ಹಾಗೂ ಇನ್ನಿತರೆ ರೋಗಗಳಿಂದ ದೂರ ಇರಬಹುದು ಎಂದು ಹೇಮಾ ಮಾಲಿನಿ ಸಲಹೆ ನೀಡಿದ್ದರು. ಇದು ಸಾಕಷ್ಟು ಟ್ರೋಲ್ ಗೀಡಾಗಿದೆ.

ಪ್ರಕೃತಿಯನ್ನು ಶುದ್ದೀಕರಿಸುವುದರ, ಜೊತೆಗೆ ಕೋವಿಡ್​-19 ನಂತಹ ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.

ಹೋಮ- ಹವನಕ್ಕೆ ಯಾವೆಲ್ಲಾ ಪದಾರ್ಥಗಳನ್ನು ಬಳಸಲಾಗುತ್ತದೆ ಎಂಬುದರ ಬಗ್ಗೆಯೂ ಹೇಮಾ ಮಾಲಿನಿ ಮಾಹಿತಿ ನೀಡಿದ್ದರು. ಬೇವಿನ ಎಲೆ, ತುಪ್ಪ, ಲವಂಗ, ಸಾಸಿವೆ, ಉಪ್ಪು ಮತ್ತು ಧೂಪ-ಇಷ್ಟು ಸಾಮಾಗ್ರಿಗಳನ್ನು ಹವನಕ್ಕೆ ಬಳಸುವಂತೆ ಸಲಹೆ ನೀಡಿದ್ದರು.