ನಟಿ ಕಮ್ ಮಾಡೆಲ್ ಗೆ ಲೈಂಗಿಕ ದೌರ್ಜನ್ಯ ಆರೋಪ: ಟ್ಯಾಕ್ಸಿ ಚಾಲಕನ ವಿರುದ್ಧ ದೂರು ದಾಖಲು.

Promotion

ಬೆಂಗಳೂರು,ನವೆಂಬರ್16,2022(www.justkannada.in): ನಟಿ ಕಮ್ ಮಾಡೆಲ್ ಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ರ್ಯಾಪಿಡೋ ಚಾಲಕನ ವಿರುದ್ಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರ್ಯಾಪಿಡೋ ಚಾಲಕ ಮಂಜುನಾಥ್ ತಿಪ್ಪೆಸ್ವಾಮಿ ಎಂಬಾತನ ವಿರುದ್ಧವೇ ದೂರು ದಾಖಲಾಗಿರುವುದು. ನಟನೆ ಡಬ್ಬಿಂಗ್ ಆರ್ಟಿಸ್ಟ್ ಆಗಿರುವ ನಟಿ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಯತ್ತಿದ್ದಾಗ ಆರೋಪಿ ಮಂಜುನಾಥ್ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ.

ಜಕ್ಕೂರಿನಿಂದ  ಬಾಬುಸಾಪಾಳ್ಯಕ್ಕೆ ತೆರಳಲು  ನಟಿ ರ್ಯಾಪಿಡೋ ಬುಕ್ ಮಾಡಿದ್ದು, ತೆರಳುವಾಗ ಯುವತಿ ಜೊತೆ  ಚಾಲಕ ಅಸಭ್ಯವಾಗಿ ವರ್ತಿಸಿದ್ದ ಎಂಬ ಆರೋಪ ಮಾಡಲಾಗಿದೆ. ಈ ಸಂಬಂಧ ನಟಿ ಕಮ್ ಮಾಡೆಲ್ ರ್ಯಾಪಿಡೋ ಚಾಲಕ ಹಾಗೂ ರ್ಯಾಪಿಡೋ ಕಂಪನಿ ವಿರುದ್ದ ಹೆಣ್ಣೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Key words: Actress-cum-model – sexual assault- File – complaint -against – taxi driver.