ಶಿವಣ್ಣ, ಆಯುಷ್ಮಾನ್’ಭವ ಟೀಂಗೆ ಆಲ್ ದಿ ಬೆಸ್ಟ್ ಹೇಳಿದ ಕಿಚ್ಚ

ಬೆಂಗಳೂರು, ಅಕ್ಟೋಬರ್ 24, 2019 (www.justkannada.in): ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಹಾಗೂ ಆಯುಷ್ಮಾನ್ ಭವ ಚಿತ್ರತಂಡಕ್ಕೆ ಕಿಚ್ಚ ಸುದೀಪ್ ಶುಭಕೋರಿದ್ದಾರೆ.

ದ್ವಾರಕೀಶ್ ಚಿತ್ರ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗಿರುವ 51 ನೇ ಸಿನಿಮಾ ಆಯುಷ್ಮಾನ್ ಭವ. ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ನವಂಬರ್ 1 ರಿಂದ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಹಿನ್ನಲೆಯಲ್ಲಿ ಕಿಚ್ಚ ಸುದೀಪ್ ತಮ್ಮ ನೆಚ್ಚಿನ ದ್ವಾರಕೀಶ್ ಮಾಮ ಮತ್ತು ಸ್ನೇಹಿತ, ನಟ ಶಿವರಾಜ್ ಕುಮಾರ್ ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.