ಕಬ್ಜ ಶೂಟಿಂಗ್ ಗೆ ಸುದೀಪ್ ಸಿದ್ಧತೆ: ಉಪ್ಪಿ-ಕಿಚ್ಚ ಜುಗಲ್’ಬಂದಿಗೆ ವೇದಿಕೆ ಸಜ್ಜು

ಬೆಂಗಳೂರು, ಮಾರ್ಚ್ 09, 2021 (www.justkannada.in): ರಿಯಲ್​ ಸ್ಟಾರ್ ಉಪ್ಪಿ ಮತ್ತು ಕಿಚ್ಚ ಸುದೀಪ್​ ಜೋಡಿ ಮತ್ತೊಮ್ಮೆ ಕಬ್ಜ ಚಿತ್ರದಲ್ಲಿ ಒಂದಾಗುತ್ತಿದೆ.

ಈಗಾಗಲೇ ಸುದೀಪ್ ಪಾತ್ರದ ಟೀಸರ್ ಬಿಡುಗಡೆ ಆಗಿದ್ದು, ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರು ಭಾರ್ಗವ್ ಬಕ್ಷಿ. 70-80ರ ದಶಕದ ಅಂಡರ್​ವಲ್ಡ್ ಡಾನ್ ಆಗಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ.

ಕಬ್ಜ ಚಿತ್ರ 2 ಭಾಗಗಳಲ್ಲಿ ತಯಾರಾಗ್ತಿದ್ದು, ಮೊದಲ ಭಾಗದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಇದೀಗ ಹೊಸ ಶೆಡ್ಯೂಲ್​ ಶೂಟಿಂಗ್​ ಶುರುಮಾಡಿರೋ ಚಿತ್ರ ತಂಡ ಕಿಚ್ಚನ ಭಾಗದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದೆ.

ಮುಂದಿನ ತಿಂಗಳು ಸುದೀಪ್, ಕಬ್ಜ ಶೂಟಿಂಗ್​ನಲ್ಲಿ ಭಾಗವಹಿಸಲಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್​ ಮಾಡುತ್ತಿದ್ದು, ಆರ್​ ಚಂದ್ರು ಆಯಕ್ಷನ್ ಕಟ್ ಹೇಳುತ್ತಿದ್ದಾರೆ.