ನಟ ಸೋನುಸೂದ್’ಗೂ ಅಂಟಿದ ಕೊರೊನಾ ಸೋಂಕು

ಬೆಂಗಳೂರು, ಏಪ್ರಿಲ್ 17, 2021 (www.justkannada.in): 

ನಟ ಸೋನು ಸೂದ್ ಅವರಿಗೂ​ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೋವಿಡ್ ಪಾಸಿಟಿವ್ ವಿಷಯವನ್ನು ಸೋನು ಖಚಿತಪಡಿಸಿದ್ದಾರೆ.

ಖಾತೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಸದ್ಯ ಕ್ವಾರಂಟೈನ್​ನಲ್ಲಿರುವುದಾಗಿ ಈ ಸಹೃದಯ ನಟ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಿಮ್ಮ ಕಷ್ಟಗಳಿಗೆ ಪರಿಹಾರ ನೀಡಲು ಈಗ ನನ್ನ ಬಳಿ ತುಂಬಾನೇ ಸಮಯವಿದೆ. ನೆನಪಿಡಿ. ನಿಮಗೆ ಏನೇ ಕಷ್ಟ ಬಂದರೂ ನಾನಿದ್ದೇನೆ ಎಂದು ಸೋನುಸೂದ್ ಟ್ವಿಟ್ ಮಾಡಿದ್ದಾರೆ.