ನಟ ಶಿವರಾಜ್’ಕುಮಾರ್ 123ನೇ ಸಿನಿಮಾ ‘ಬೈರಾಗಿ’ ಜುಲೈ 1ಕ್ಕೆ ರಿಲೀಸ್

Promotion

ಬೆಂಗಳೂರು, ಜೂನ್ 14, 2022 (www.justkannada.in): ನಟ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಜುಲೈ 1ಕ್ಕೆ ಬಿಡುಗಡೆಯಾಗಲಿದೆ.

ಬಿಡುಗಡೆಗೂ ಮುನ್ನವೇ ಚಿತ್ರ ಲಾಭದಲ್ಲಿದ್ದು, ಚಿತ್ರದ ಸ್ಯಾಟಲೈಟ್‌ ಹಕ್ಕುಗಳು ₹10 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.

ಸದ್ಯಕ್ಕೆ ಈ ಸಿನಿಮಾ ಕನ್ನಡದಲ್ಲಷ್ಟೇ ಬಿಡುಗಡೆಯಾಗುತ್ತಿದ್ದು, ಇತರೆ ಭಾಷೆಗಳಿಂದಲೂ ಡಬ್ಬಿಂಗ್‌ಗೆ ಬೇಡಿಕೆ ಬಂದಿದೆ ಎಂದು ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಎಸ್‌.ಡಿ. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರ ನಟ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾವಾಗಿದೆ. ನನ್ನ ಹಾಗೂ ‘ಡಾಲಿ’ ಧನಂಜಯ್‌ ಪಾತ್ರ ಯಾವ ರೀತಿ ಇರಲಿದೆ ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡಬೇಕು’ ಎಂದು ನಟ ಶಿವಣ್ಣ ತಮ್ಮ ಪಾತ್ರದ ಕುರಿತು ಹೇಳಿದ್ದಾರೆ.