ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಹುಲಿ ಡ್ಯಾನ್ಸ್ ವೈರಲ್ !

ಬೆಂಗಳೂರು, ಆಗಸ್ಟ್ 24, 2019 (www.justkannada.in): ಉಡುಪಿಯ ಕೊರಂಗ್ರಪಾಡಿಯ ಯಂಗ್ ಫ್ರೆಂಡ್ಸ್ ಟೀಂ ಜೊತೆ ರಕ್ಷಿತ್ ಶೆಟ್ಟಿ ಮಾಡಿರುವ ಹುಲಿ ಡ್ಯಾನ್ಸ್ ವೈರಲ್ ಆಗಿದೆ.

ಕೊಲ್ಲೂರಿನಲ್ಲಿ ಅವರ ಕುಟುಂಬ ಮಾಡಿಸಿದ್ದ ಚಂಡಿಕಾ ಹೋಮಕ್ಕೆ ಬಂದಿದ್ದ ರಕ್ಷಿತ್ ಮನೆಯಲ್ಲೇ ಉಳಿದುಕೊಂಡು ಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡಿದ್ದಾರೆ.

ಈ ವೇಳೆ ರಕ್ಷಿತ್ ಮಾಡಿದ ಹುಲಿ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದೆ. ಸೋಷಿಯಲ್ ಮೀಡಿಯಾದಲ್ಲೂ ರಕ್ಷಿತ್ ಡ್ಯಾನ್ಸ್ ವೈರಲ್ ಆಗಿದೆ.