ಪ್ರಭಾಸ್ ಸಂಭಾವನೆ ಕೇಳಿ ಶಾಕ್ ! ಆದಿಪುರುಷ್ ಸಿನಿಮಾ ಬರೋಬ್ಬರಿ 100 ಕೋಟಿ ರೂ.!

kannada t-shirts

ಬೆಂಗಳೂರು, ಜೂನ್ 24, 2022 (www.justkannada.in): ಪ್ರಭಾಸ್ ಈಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ರೆಡಿಯಾಗಿದ್ದು, ಈ ಚಿತ್ರಕ್ಕೆ ಸಂಭಾವನೆ ಏರಿಕೆ ಮಾಡಿದ್ದಾರಂತೆ!

ಹೌದು. ಪ್ರಭಾಸ್ ಮಾಡುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಗೆ ಸಂಭಾವನೆ ಏರಿಕೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಐತಿಹಾಸಿಕ ಸಿನಿಮಾವಾದ ಆದಿಪುರುಷ್ ನಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಸಿನಿಮಾಗಾಗಿ ಶೇ.20 ರಷ್ಟು ಸಂಭಾವನೆ ಏರಿಕೆ ಮಾಡಿದ್ದಾರಂತೆ ಎಂಬ ಸುದ್ದಿ ಹೊರಬಿದ್ದಿದೆ.

ಆದಿಪುರುಷ್ ಸಿನಿಮಾಗೆ ಬರೋಬ್ಬರಿ 100 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಪ್ರಭಾಸ್ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ.

website developers in mysore