‘ರಾಮ’ನಾಗಲು ದೇಹ ಸಜ್ಜುಗೊಳಿಸುತ್ತಿದ್ದಾರೆ ಪ್ರಭಾಸ್ !

ಬೆಂಗಳೂರು, ನವೆಂಬರ್ 28, 2020 (www.justkannada.in): ಪ್ರಭಾಸ್ ‘ಆದಿಪುರುಷ್’ ಚಿತ್ರಕ್ಕಾಗಿ ತಯಾರಾಗುತ್ತಿದ್ದಾರೆ. ಈ ನಡುವೆ ಪ್ರಭಾಸ್ ಅವರ ಇತ್ತೀಚೆಗಿನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಓಂರೌತ್ ನಿರ್ದೇಶನದ ‘ಆದಿಪುರುಷ್’​ ರಾಮಾಯಣದ ಕಥೆಯನ್ನು ಆಧರಿಸಿದ್ದು. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸುತ್ತಿದ್ದಾರೆ.

ಪರಿಣಿತರೊಂದಿಗೆ ಚರ್ಚಿಸಿ ಅವರ ಸಲಹೆ ಮೇರೆಗೆ ವರ್ಕೌಟ್ ಆರಂಭಿಸಿದ್ದಾರೆ. ‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ಎದುರು ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ತೆಲುಗು, ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಲಿರುವ ಸಿನಿಮಾ 2022 ಆಗಸ್ಟ್​​​ 11 ರಂದು ಬಿಡುಗಡೆಯಾಗಲಿದೆ.