ನಟ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಘೋಷಣೆ

Promotion

ಬೆಂಗಳೂರು, ಸೆಪ್ಟೆಂಬರ್ 28, 2021 (www.justkannada.in): ನಟ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ನಟಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

‘ರೈಡರ್’ ಸಿನಿಮಾ ಡಬ್ಬಿಂಗ್ ಪೂರ್ಣಗೊಳಿಸಿರುವ ನಿಖಿಲ್ ಕುಮಾರಸ್ವಾಮಿ ಇದೀಗ ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ‘ರೈಡರ್’ ಸೇರಿದರೆ ಈವರೆಗೆ ನಾಲ್ಕು ಸಿನಿಮಾಗಳಲ್ಲಿ ನಿಖಿಲ್ ನಟಿಸಿದ್ದು, ಐದನೇ ಸಿನಿಮಾ ಘೋಷಣೆ ಆಗಿದೆ.

ಕೆವಿಎನ್ ಪ್ರೊಡಕ್ಷನ್ಸ್‌ನ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಲಿದ್ದು, ಸಿನಿಮಾವನ್ನು ಹೊಸ ನಿರ್ದೇಶಕ ಮಂಜು ಅಥರ್ವ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾದ ಪೋಸ್ಟರ್‌ಗಾಗಿ ಫೊಟೊ ಶೂಟ್‌ ಆಗಬೇಕಿತ್ತು ಆದರೆ ಅದೇ ವೇಳೆಗೆ ನಿಖಿಲ್ ತಂದೆಯಾದ ಕಾರಣ ಕೆಲವು ದಿನಗಳ ಮಟ್ಟಿಗೆ ಫೋಟೊ ಶೂಟ್ ಮುಂದೂಡಲಾಗಿದೆ.

key words: Actor Nikhil Kumaraswamy announces new cinema