ಇಂದು ಅಮೆಜಾನ್ ಪ್ರೈಂನಲ್ಲಿ ನಾನಿ 25ನೇ ಸಿನಿಮಾ ‘ವಿ’ ರಿಲೀಸ್

ಹೈದರಾಬಾದ್, ಸೆಪ್ಟೆಂಬರ್ 05, 2020 (www.justkannada.in): ತೆಲುಗು ನಟ ನಾನಿ ಅವರ 25ನೇ ಸಿನಿಮಾ ‘ವಿ’ ಇಂದು ಅಮೆಜಾನ್ ಪ್ರೈ ನಲ್ಲಿ ರಿಲೀಸ್ ಆಗಲಿದೆ.

ಇಂದ್ರಗಾಂತಿ ಮೋಹನ್ ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ ‘ವಿ’ ಸಿನಿಮಾದಲ್ಲಿ ನಟ ನಾನಿ ಜೊತೆ ನಿವೇದಿತಾ ಥಾಮಸ್ , ಅದಿತಿ ರಾವ್ ಹೈದರಿ ನಟಿಸಿದ್ದಾರೆ. ಇದೊಂದು ಆಯಕ್ಷನ್ ಸಿನಿಮಾವಾಗಿದೆ.

ಇದೇ ವರ್ಷ ಮಾರ್ಚ್ ನಲ್ಲಿ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ನಿಂದ ಚಿತ್ರಮಂದಿರ ಬಂದ್ ಆದ ಕಾರಣ ಇದೀಗ ಚಿತ್ರವನ್ನು ಅಮೆಜಾನ್ ಪ್ರೈ ನಲ್ಲಿ ರಿಲೀಸ್ ಮಾಢಲು ಚಿತ್ರತಂಡ ನಿರ್ಧರಿಸಿದೆ. ಅದರಂತೆ ಇಂದು(ಸೆಪ್ಟೆಂಬರ್ 5ರಂದು) ಅಮೆಜಾನ್ ಪ್ರೈ ನಲ್ಲಿ ರಿಲೀಸ್ ಆಗಲಿದೆ.