ಸತಿ-ಪತಿಗಳಾಗುತ್ತಿದ್ದಾರೆ ‘ಲವ್ ಮಾಕ್ಟೈಲ್’ ಜೋಡಿ ಕೃಷ್ಣ-ಮಿಲನ

ಬೆಂಗಳೂರು, ಫೆಬ್ರವರಿ 13, 2020 (www.justkannada.in): ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ಇದೇ ವರ್ಷ ಹಸೆಮಣೆ ಏರಲು ರೆಡಿಯಾಗಿದ್ದಾರೆ.

ಹೌದು. ಸ್ಯಾಂಡಲ್’ವುಡ್’ನ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಇತ್ತೀಚೆಗೆ ಲವ್ ಮಾಕ್ಟೈಲ್ ​ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು .

ಸದ್ಯ ಲವ್ ಮಾಕ್ಟೈಲ್ ಸಿನಿಮಾದ ಸಕ್ಸಸ್ ಮೀಟ್ ​ ನಲ್ಲಿ ಈ ಜೋಡಿ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿದೆ . ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿರುವ ಕೃಷ್ಣ – ಮಿಲನ ಇದೇ ವರ್ಷ ನಿಶ್ಚಿತಾರ್ಥ ಮಾಡಿಕೊಂಡು ವಿವಾಹ ಆಗಲಿದ್ದಾರಂತೆ.