‘KGF’ ಹಾಗೂ ‘RRR’ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೊಸದಲ್ಲ ಎಂದ ನಟ ಕಮಲ್ ಹಾಸನ್

ಬೆಂಗಳೂರು, ಮೇ 27, 2022 (www.justkannada.in): ‘ಕೆಜಿಎಫ್​’ ಹಾಗೂ ‘ಆರ್​ಆರ್​ಆರ್​’ ತಂಡದ್ದು ಪ್ಯಾನ್ ಇಂಡಿಯಾ ವಿಚಾರದಲ್ಲಿ ಹೊಸ ಪ್ರಯತ್ನವಲ್ಲ ಎಂದಿದ್ದಾರೆ  ಎಂದಿದ್ದಾರೆ ನಟ ಕಮಲ್ ಹಾಸನ್.

‘ವಿಕ್ರಮ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಪ್ರಮೋಷನ್​ಗೆ ದೆಹಲಿಗೆ ತೆರಳಿದ್ದರು. ಈ ವೇಳೆ ಅಲ್ಲಿ ಹಲವು ವಿಚಾರಗಳ ಬಗ್ಗೆ ಕಮಲ್ ಹಾಸನ್ ಮಾತನಾಡಿದ್ದಾರೆ.

‘ಬಾಹುಬಲಿ’ ತೆರೆಕಂಡ ನಂತರದಲ್ಲಿ ಪ್ಯಾನ್​ ಇಂಡಿಯಾ ಕಾನ್ಸೆಪ್ಟ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ, ಆ ಮೊದಲೇ ಈ ರೀತಿಯ ಪ್ರಯತ್ನಗಳು ನಡೆದಿದ್ದವು ಎಂದು ಕಮಲ್ ಹಾಸನ್  ಹೇಳಿದ್ದಾರೆ.

ಪ್ಯಾನ್​ ಇಂಡಿಯಾ ಎಂಬ ಕಾನ್ಸೆಪ್ಟ್ ಮೊದಲಿನಿಂದಲೂ ಇತ್ತು. ವಿ. ಶಾಂತಾರಾಮ್​ ಅವರು ಪ್ಯಾನ್​ ಇಂಡಿಯಾ ಸಿನಿಮಾ ಮಾಡಿದ್ದರು. 1960ರ ‘ಮುಘಲ್​-ಇ-ಅಜಾಮ್​’ ಹಾಗೂ 1965ರ ‘ಚೆಮ್ಮೀನ್​’ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.