ಚಾರ್ಲಿ 777 ಮೆಚ್ಚಿ ನಿರ್ದೇಶಕ ಕಿರಣ್ ರಾಜ್’ಗೆ ಕರೆ ಮಾಡಿದ ನಟ ಜಾನ್ ಅಬ್ರಾಹಂ

Promotion

ಬೆಂಗಳೂರು, ಜೂನ್ 16, 2022 (www.justkannada.in): ಈಗ ನಟ ಜಾನ್​ ಅಬ್ರಾಹಂ ಅವರು ಚಾರ್ಲಿ 777 ಚಿತ್ರದ ನಿರ್ದೇಶಕ ಕಿರಣ್​ ರಾಜ್​ಗೆ ಕರೆ ಮಾಡಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಹೌದು. ಈ ವಿಷಯವನ್ನು ಸ್ವತಃ ಕಿರಣ್ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘777 ಚಾರ್ಲಿ’ ಸಿನಿಮಾಗೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಶ್ವಾನ ಹಾಗೂ ಮನುಷ್ಯನ ನಡುವಿನ ಭಾವನಾತ್ಮಕ ಕಥೆಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಇದೀಗ ಜಾನ್​ ಅಬ್ರಾಹಂ ಕೂಡ ಚಾರ್ಲಿ 777 ಮೆಚ್ಚಿಕೊಂಡಿದ್ದು, ನಿರ್ದೇಶಕ ಕಿರಣ್​ ರಾಜ್​ಗೆ ಕರೆ ಮಾಡಿ ಶ್ಲಾಘಿಸಿದ್ದಾರೆ.

‘777 ಚಾರ್ಲಿ’ ಸಿನಿಮಾದ ಟ್ರೇಲರ್ ನೋಡಿರುವ ಅವರು ಕಿರಣ್ ರಾಜ್​ಗೆ ಕರೆ ಮಾಡಿ ಪ್ರೀತಿಯಿಂದ ನಾಲ್ಕು ಮಾತನಾಡಿದ್ದಾರೆ. ಮೊದಲ ಪ್ರಯತ್ನಕ್ಕೆ ಇಷ್ಟೊಂದು ಮೆಚ್ಚುಗೆ ಸಿಗುತ್ತಿರುವುದಕ್ಕೆ ಕಿರಣ್ ರಾಜ್ ಖುಷಿಯಾಗಿದ್ದಾರೆ.