ಭಟ್ಟರೊಂದಿಗೆ ಮತ್ತೊಮ್ಮೆ ಗಾಳಿಪಟ ಹಾರಿಸಲಿದ್ದಾರೆ ಗಣೇಶ್-ದಿಗಂತ್

ಬೆಂಗಳೂರು, ಜುಲೈ 30, 2019 (www.justkannada.in): ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾಗಾಗಿ ಗೋಲ್ಡನ್ ಸ್ಟಾರ್ ಗಣೇಶ್,  ದುದ್ ಪೇಡಾ ದಿಗಂತ್ ಒಂದಾಗುತ್ತಿದ್ದಾರೆ.

ಈ ಮೊದಲು ಗಾಳಿಪಟ-2ನಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಯೋಗರಾಜ್ ಭಟ್ ಯೋಜನೆ ಹಾಕಿಕೊಂಡಿದ್ದರು. ಆದರೆ ಸಿನಿಮಾ ಘೋಷಣೆಯಾದ ಬೆನ್ನಲ್ಲೇ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಗಣೇಶ್ ಇರಲೇಬೇಕೆಂದು ಒತ್ತಾಯ ಮಾಡಿದ್ದರು.

ಅಭಿಮಾನಿಗಳ ಒತ್ತಾಯದ ಮೇರೆಗೆ ಗಾಳಿಪಟ 2 ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಲಿದ್ದಾರೆ. ಗಣೇಶ್ ಜತೆಗೆ ಗಾಳಿಪಟ ಮೊದಲ ಭಾಗದಲ್ಲಿ ಅಭಿನಯಿಸಿದ್ದ ದೂದ್ ಪೇಡಾ ದಿಗಂತ್ ಮತ್ತು ಅನಂತನಾಗ್ ಕೂಡಾ ಈ ಭಾಗದಲ್ಲಿ ಅಭಿನಯಿಸಲಿದ್ದಾರೆ.