ಲಾಕ್ ಡೌನ್ ಟೈಂ ಸದುಪಯೋಗಕ್ಕೆ ನಟ, ನಿರ್ದೇಶಕ ಶ್ರೀನಿ ಹೊಸ ಪ್ರಯತ್ನ: ಖ್ಯಾತನಾಮರ ಜೊತೆ ಮೀಡಿಯಾದಲ್ಲಿ ಸಿನಿಮಾ ‘ಆನ್ ಲೈನ್’ ಮಾತುಕತೆ

Promotion

ಬೆಂಗಳೂರು, ಏಪ್ರಿಲ್ 10, 2020 (www.justkannada.in): ನಟ, ನಿರ್ದೇಶಕ ಶ್ರೀನಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಲಾಕ್ ಡೌನ್ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಹೊಸ ಕಾರ್ಯಕ್ರಮ ಮಾಡುತ್ತಿದ್ದಾರೆ, ಈ ಮೂಲಕ ಕನ್ನಡ ಯುವ ಸಿನಿಮಾ ಪ್ರತಿಭೆಗಳಿಗೆ ಸಹಾಯ ಆಗುವ ದೃಷ್ಟಿಯಿಂದ ಶ್ರೀನಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ‘ದಂಗಲ್’ ನಿರ್ದೇಶಕರನ್ನು ಕನ್ನಡ ಜನರ ಮುಂದೆ ಮಾತಿಗೆ ಕೂರಿಸುತ್ತಿದ್ದಾರೆ. ಅಮೀರ್ ಖಾನ್ ನಟನೆಯ, ಭಾರತ ಚಿತ್ರರಂಗದ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ನಂಬರ್ ಒನ್ ಚಿತ್ರ ‘ದಂಗಲ್’ ನಿರ್ದೇಶಕ ನಿತೇಶ್ ತಿವಾರಿ ಮಾತುಗಳನ್ನು ಕೇಳಬಹುದಾಗಿದೆ‌.

ಶ್ರೀನಿ Instagram ಖಾತೆಯಲ್ಲಿ ನೀವು ಏಪ್ರಿಲ್ 13‌‌ರಂದು ಸಂಜೆ 6ಗಂಟೆಗೆ ವಿಡಿಯೋ ಲೈವ್ ವೀಕ್ಷಣೆ ಮಾಡಬಹುದಾಗಿದೆ.  ಮೂರು ದಿನಗಳ‌ ಈ ವಿಶೇಷ ಮಾತುಕತೆ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ 11 ರಂದು 6 ಗಂಟೆಗೆ ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಹಾಗೂ ಕೆ ಆರ್ ಜಿ ಸ್ಟೂಡಿಯೋದ ವಿತರಕ ಕಾರ್ತಿಕ್ ಗೌಡ ಮಾತನಾಡಲಿದ್ದಾರೆ.

ಏಪ್ರಿಲ್ 12 ರಂದು ಅಸುರ್ ವೆಬ್ ಸೀರಿಸ್ ಬರಹಗಾರ ಗೌರವ್ ಶುಕ್ಲ ಮಾತನಾಡಲಿದ್ದಾರೆ. ಎಲ್ಲ ವಿಡಿಯೋಗಳನ್ನು ನಿರ್ದೇಶಕ ಶ್ರೀನಿ Instagram ಖಾತೆಯ ಮೂಲಕ ನೋಡಬಹುದಾಗಿದೆ. ಅವರ ಖಾತೆ  ಇದಾಗಿದೆ @lordmgsrinivas