ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಟ ಧ್ರುವ ಸರ್ಜಾ: ಬೆಂಗಳೂರಿನಲ್ಲಿ ಸರ್ಜಾ ಕುಟುಂಬದ ಮದುವೆ ಸಂಭ್ರಮ

Promotion

ಬೆಂಗಳೂರು, ನವೆಂಬರ್, 24, 2019 (www.justkannada.in): ಬೆಂಗಳೂರಿನ ಜೆ.ಪಿ.ನಗರದಲ್ಲಿ ಇರುವ ಸಂಸ್ಕೃತಿ ಬೃಂದಾವನ ಕನ್ಷೆನ್ಸನ್ ಹಾಲ್ ನಲ್ಲಿ ಧ್ರುವ ಸರ್ಜಾ-ಪ್ರೇರಣಾ ಶಂಕರ್ ಮದುವೆ ಅದ್ಧೂರಿಯಾಗಿ ನಡೆಯಿತು.

ಈ ಮೂಲಕ ಧ್ರುವ ಸರ್ಜಾ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಆಂಜಿನೇಯನ ಅಪ್ಪಟ ಭಕ್ತ ಧ್ರುವ ಸರ್ಜಾ ವೈವಾಹಿಕ ಬದುಕು ಆರಂಭಿಸಿದ್ದಾರೆ. 15 ವರ್ಷಗಳಿಂದ ಪ್ರೀತಿ ಮಾಡುತ್ತಿರುವ ಪ್ರೇರಣಾ ಶಂಕರ್ ರವರ ಕೈಹಿಡಿದಿದ್ದಾರೆ ಧ್ರುವ ಸರ್ಜಾ.

ಇಂದು ಬೆಳಗ್ಗೆ 7.15 ರಿಂದ 7.45 ರವರೆಗೆ ಇದ್ದ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಹಸೆ ಮಣೆ ಏರಿದರು. 7.45 ರ ಸುಮಾರಿಗೆ ಪ್ರೇರಣಾ ಶಂಕರ್ ಕೊರಳಿಗೆ ಧ್ರುವ ಸರ್ಜಾ ಮಾಂಗಲ್ಯಧಾರಣೆ ಮಾಡಿದರು.

ಮುಹೂರ್ತ ಸಮಾರಂಭಕ್ಕೆ ಕ್ರೀಮ್ ಮತ್ತು ಕೇಸರಿ ಬಣ್ಣದ ರೇಶ್ಮೆ ಸೀರೆಯಲ್ಲಿ ವಧು ಪ್ರೇರಣಾ ಶಂಕರ್ ಮಿಂಚಿದರೆ, ವರ ಧ್ರುವ ಸರ್ಜಾ ಬಿಳಿ ಬಣ್ಣದ ರೇಶ್ಮೆ ಪಂಚೆ-ಶರ್ಟ್ ಧರಿಸಿದ್ದರು.