ಗಣೇಶ ಹಬ್ಬದ ದಿನ ಅಪ್ಪನಾದ ಖುಷಿಯಲ್ಲಿ ನಟ ಧ್ರುವ ಸರ್ಜಾ !

Promotion

ಬೆಂಗಳೂರು, ಸೆಪ್ಟೆಂಬರ್ 18, 2023 (www.justkannada.in): ನಟ ಧ್ರುವ ಸರ್ಜಾ ಅವರ ಮನೆಗೆ ಗೌರಿ-ಗಣೇಶ ಹಬ್ಬದ ದಿನವೇ ಹೊಸ ಅತಿಥಿಯ ಆಗಮನವಾಗಿದೆ.

ಹೌದು. ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್‌ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಹಬ್ಬದ ದಿನವೇ ಹೊಸ ಅತಿಥಿ ಆಗಮನ ಸರ್ಜಾ ಕುಟುಂಬದಲ್ಲಿ ಸಂತಸಕ್ಕೆ ಕಾರಣವಾಗಿದೆ. ಬೆಂಗಳೂರಿನ ಕೆ.ಆರ್.ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಪ್ರೇರಣಾ ಹೆರಿಯಾಗಿದೆ.

ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು, ಸ್ಯಾಂಡಲ್‌ವುಡ್‌ ಆಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಪ್ಪನಾದ ಸಂಭ್ರಮದಲ್ಲಿದ್ದಾರೆ.