ಲಕ್ನೋದಲ್ಲಿ ‘ಡಾಲಿ’ ಹವಾ ! ಶೂಟಿಂಗ್’ನಲ್ಲಿ ಧನಂಜಯ್ ಆ್ಯಂಡ್ ಟೀಂ ಬ್ಯುಸಿ

kannada t-shirts

ಬೆಂಗಳೂರು, ಜನವರಿ 20, 2019 (www.justkannada.in): ಡಾಲಿ ಸಿನಿಮಾ ಚಿತ್ರೀಕರಣ ಲಕ್ನೋದಲ್ಲಿ ಶುರುವಾಗಿದ್ದು ಭರ್ಜರಿಯಾಗಿ ಶೂಟಿಂಗ್ ಸಾಗಿದೆ.

ಪ್ರಭು ಶ್ರೀನಿವಾಸ್‌ ಚಿತ್ರ ನಿರ್ದೇಶಿಸುತ್ತಿದ್ದು, ಲಕ್ನೋದಲ್ಲಿ ಸುಮಾರು 23 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಟಗರು ಚಿತ್ರದಲ್ಲಿ ಡಾಲಿ ಹೆಸರಿನ ನೆಗೆಟಿವ್‌ ಕ್ಯಾರೆಕ್ಟರ್‌ನಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ಧನಂಜಯ್ ಆ ಪಾತ್ರದ ಹೆಸರನ್ನೇ ಚಿತ್ರದ ಟೈಟಲ್‌ಗಿಟ್ಟಿರೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಚಿತ್ರದಲ್ಲಿ ಧನಂಜಯ್‌ ಲುಕ್‌ ರಿವೀಲ್‌ ಆಗಿದ್ದು, ರಗಡ್‌ ಲುಕ್‌ನಲ್ಲಿ ವಯಲೆಂಟ್‌ ಆಗಿ ಡಾಲಿ ಹೆಸರಿಗೆ ತಕ್ಕಂತೆ ಕಾಣಿಸಿಕೊಂಡಿದ್ದಾರೆ. ಕೋಲ್ಕತ್ತಾ, ಆಗ್ರಾ, ಲಖನೌ ಮತ್ತಿತರ ನಗರಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿದೆ.

website developers in mysore